ಹಾಫ್ ಹೆಲ್ಮೆಟ್ ಧರಿಸಿದರೆ ಇನ್ನು ಬೀಳುತ್ತೆ ದಂಡ | ಹೆಲ್ಮೆಟ್ ಕೊಳ್ಳುವ ಸಂದರ್ಭ ಖಚಿತ ಪಡಿಸಿಕೊಳ್ಳಿ ISI ಮಾರ್ಕ್ !
ದ್ವಿಚಕ್ರ ವಾಹನ ಸವಾರರು ಇನ್ನು ಮುಂದೆ ಹಾಫ್ ಹೆಲ್ಮೆಟ್ ಧರಿಸುವಂತಿಲ್ಲ. ಜೊತೆಗೆ ಐಎಸ್ ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸುವಂತಿಲ್ಲ ಎಂದು ಸಿಟಿ ಸಂಚಾರಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ರೂಲ್ಸ್ ಜಾರಿಯಾಗಿರುವುದು ಬೆಂಗಳೂರಿನಲ್ಲಿ. ಇನ್ನು ಮುಂದೆ ಹಾಫ್ ಹೆಲ್ಮೆಟ್ ಧರಿಸಿದರೆ ದಂಡ ಬೀಳುವುದು ಗ್ಯಾರಂಟಿ.
ಬೆಂಗಳೂರಿನಲ್ಲಿ ಗುಣಮಟ್ಟದ ಹೆಲ್ಮೆಟ್ ಧರಿಸ ಬೇಕೆಂದು ಸಿಟಿ ಮಾರ್ಕೆಟ್ ಠಾಣೆಯ ಪಿಎಸ್ ಐ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಬೈಕ್ ಸವಾರರು ಫುಲ್ ಹೆಲ್ಮೆಟ್ ಧರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿ ಓಡಾಡುವ ದ್ವಿಚಕ್ರ ವಾಹನ ಸವಾರರಿಗೆ ದಂಡ ಬೀಳುವುದು ಖಚಿತ.