ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ | ಈಕೆಯ ನಾಲಿಗೆಯಲ್ಲಿ ಬೆಳೆಯುತ್ತಿದೆ ಕೂದಲು !
ಈ ಮಹಿಳೆ ಒಂದು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದು ಆಕೆಗೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿದೆ. ಕಾರಣ ಆಕೆಯ ನಾಲಿಗೆಯಲ್ಲಿ ಬೆಳೆಯುತ್ತಿರುವ ಕೂದಲು !
ಈಕೆಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ರುಚಿ ಗ್ರಹಿಸುವ ಶಕ್ತಿ ಇಲ್ಲದೆ ಹೋಯಿತು. ಅನಂತರ ಡಾಕ್ಟರ ಬಳಿ ತಪಾಸಣೆಗೊಳಗದಾಗ ನಾಲಿಗೆ ಕ್ಯಾನ್ಸರ್ ಗೆ ತುತ್ತಾಗಿರೋದು ಗೊತ್ತಾಗಿದೆ. ನಾಲಿಗೆ ರುಚಿ ಗ್ರಹಣ ಶಕ್ತಿ ಕಳೆದುಕೊಂಡಿದ್ದರಿಂದ ಏಳು ಪೌಂಡ್ ತೂಕ ಕಡಿಮೆಯಾಯಿತು. ನಂತರ ಶಸ್ತ್ರಚಿಕಿತ್ಸೆಗೊಳಗಾದ ಆಕೆಯ ಕ್ಯಾನ್ಸರ್ ಗುಣ ಆಯಿತು. ಆದರೆ ತನ್ನ ಅರ್ಧ ನಾಲಿಗೆಯನ್ನೇ ಕಳೆದುಕೊಳ್ಳಬೇಕಾಗಿ ಬಂದಿತ್ತು.
ಆ ಅರ್ಧ ನಾಲಿಗೆಗೆ ಬದಲಿಗೆ ಆಕೆಯ ಕಾಲಿನ ಚರ್ಮವನ್ನು ತೆಗೆದು ಕಸಿ ಮಾಡಲಾಯಿತು. ಇದೆಲ್ಲಾ ಆಗಿ ಇನ್ನೇನು ನೆಮ್ಮದಿಯ ಜೀವನ ಸಾಗಿಸುತ್ತಿರುವಾಗಲೇ, ಸುಮಾರು 9 ತಿಂಗಳ ನಂತರ ಈಕೆಯ ಕಾಲಿನ ಚರ್ಮ ಜೋಡಿಸಲಾಗಿದ್ದ ಅರ್ಧ ನಾಲಗೆಯಲ್ಲಿ ಕೂದಲು ಬೆಳೆಯಲು ಪ್ರಾರಂಭವಾಗಿದೆ.
ಈ ಘಟನೆ ನಡೆದಿರುವುದು ಕೊಲೆರಾಡೋ ( ಅಮೆರಿಕಾ) ದಲ್ಲಿ. ಆ 43 ವರ್ಷದ ಕ್ಯಾಮರೂನ್ ಕೊಲೆರಾಡೋದಲ್ಲಿ ಜಿಮ್ನಾಸ್ಟಿಕ್ ತರಬೇತುದಾರೆಯಾಗಿ ಕೆಲಸ ಮಾಡುತ್ತಿದ್ದಾಳೆ.
ಇದರಿಂದ ತೀವ್ರ ಆಘಾತಗೊಂಡ ಕ್ಯಾಮರೂನ್ ಏನೂ ಉಪಾಯ ತೋಚದೆ ಹಾಗೆಯೇ ಜೀವನ ಸಾಗಿಸುತ್ತಿದ್ದಾಳೆ. ನಾಲಿಗೆಯಲ್ಲಿನ ಕೂದಲು ಆಕೆಗೆ ಕಿರಿಕಿರಿ ಉಂಟು ಮಾಡಿದೆ. ಆದರೂ ಅದನ್ನು ಮರೆಯಲು ತಮ್ಮ ಜಿಮ್ನಾಸ್ಟಿಕ್ ವೃತ್ತಿಯನ್ನು ಮುಂದುವರಿಸುತ್ರಾ ಜೀವನ ಸಾಗಿಸುತ್ತಿದ್ದಾರೆ.
ಊಟಮಾಡಿದಾಗ, ಮಾತನಾಡಿದಾಗ ಈ ನಾಲಗೆಯಲ್ಲಿನ ಕೂದಲು ಹಿಂಸೆ ಕೊಡುತ್ತದೆ. ಊಟದ ರುಚಿಯೂ ಗೊತ್ತಾಗುವುದಿಲ್ಲವಂತೆ. ಇಂತಹ ಸುಮಾರು ಸಮಸ್ಯೆಗಳ ಮಧ್ಯೆ ಕ್ಯಾಮರೂನ್ ತನ್ನ ವೃತ್ತಿಯಾದ ಜಿಮ್ನಾಸ್ಟಿಕ್ ಮೂಲಕ ಈ ನೋವು ಮರೆತು ಜೀವನವನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ತೊಂದರೆಗಳ ಜತೆಗೇ ಬದುಕು ಸಾಗಿದೆ.