ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ರ‍್ಯಾಂಕ್!! ಒಂದೇ ಬಾರಿಗೆ ಹುದ್ದೆಗೆ ಆಯ್ಕೆಗೊಂಡ ಅಣ್ಣ-ತಂಗಿ

ರಾಯಚೂರು: ರಾಜ್ಯ ಸಿವಿಲ್ ಪೊಲೀಸ್ ಪಿಎಸ್ಐ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಅಣ್ಣ-ತಂಗಿ ಇಬ್ಬರೂ ತೇರ್ಗಡೆ ಹೊಂದಿ ಒಂದೇ ಬಾರಿಗೆ ಹುದ್ದೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಿಲ್ಲೆಯ ತಾಂಡ ನಿವಾಸಿಗಳಾದ ಕಾರ್ತಿಕ್ ರಾಠೋಡ್ ಹಾಗೂ ರೂಪಾ ರಾಠೋಡ್ ಎಂಬಿಬ್ಬರು ಅಣ್ಣ-ತಂಗಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ತಂಗಿ ರೂಪ 46 ರ‍್ಯಾಂಕ್ ಹಾಗೂ ಅಣ್ಣ ಕಾರ್ತಿಕ್ 78ನೇ ರ‍್ಯಾಂಕ್ ಪಡೆದು ಹುದ್ದೆಗೆ ಆಯ್ಕೆಯಾಗಿದ್ದಾರೆ.ಬಿಎಸ್ಸಿ ಹಾರ್ಟಿಕಲ್ಚರ್ ಹಾಗೂ ಬಿಎಸ್ಸಿ ಫಾರೆಸ್ಟ್ ಓದಿರುವ ಇವರಿಬ್ಬರು ಪ್ರಾಚಾರ್ಯರಾದ ಶಂಕರ್ ರಾಠೋಡ್ ಅವರ ಮಕ್ಕಳು.

Leave A Reply

Your email address will not be published.