ಕುಟ್ರುಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ!!|ಗೊಂದಲ ಸೃಷ್ಟಿಸಿದ್ದ ಹೊಸ್ಮಠ ಬಲ್ಯ |ದೇರಾಜೆ ಕ್ರಾಸ್ ಸಮಸ್ಯೆಗೆ ಸಿಕ್ಕಿತು ಪರಿಹಾರ
ಕುಟ್ರುಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಜನವರಿ 20ರಂದು ಪಂಚಾಯತ್ ಅಧ್ಯಕ್ಷ ಮೋಹನ ಕೆರೆಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಈಗಾಗಲೇ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಮಂಜೂರಾದ ಪಂಚಾಯತ್ ಸಭಾಭವನದ ಕಾಮಗಾರಿ ಪೂರ್ತಿಯಾಗಿರದ ಬಗ್ಗೆ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಗರಂ ಆದರು. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಗೆ ಪತ್ರ ಬರೆಯುವ ಬಗ್ಗೆ ಕ್ರಮ ಕೈಗೊಳ್ಳಲಾಯಿತು.
ಕಳೆದ ಕೆಲ ಸಮಯಗಳಿಂದ ಗೊಂದಲ ಸೃಷ್ಟಿಸಿದ್ದ ಹೊಸ್ಮಠ ಬಲ್ಯ ದೇರಾಜೆ ಕ್ರಾಸ್ ಬಗೆಗಿನ ಗೊಂದಲವನ್ನು ಹೋಗಲಾಡಿಸಲು ಇನ್ನು ಮುಂದೆ ಹೊಸ್ಮಠ ಬಲ್ಯ, ದೇರಾಜೆ ಪನ್ಯಾಡಿ ತಿರುವು ರಸ್ತೆ ಎಂದು ಫಲಕ ಅಳವಡಿಸುವಂತೆ ನಿರ್ಣಯ ಮಾಡಲಾಯಿತು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ವಾಣಿ ನಾಗೇಶ್ ಬನಾರಿ, ಸದಸ್ಯರಾದ ಸಂತೋಷ್ ಪಿ, ಕಿರಣ್ ಗೋಗಟೆ, ಮೀನಾಕ್ಷಿ ಗೌಡ, ಲಕ್ಷ್ಮೀಶ ಬಂಗೇರ, ರಮೇಶ್ ಪಿ, ಭಾಸ್ಕರ ಸನಿಲ, ಡಿ. ವಿಜಯ, ಸ್ವಪ್ನ ಪಿ.ಜೆ,ಮಹಮ್ಮದ್ ಆಲಿ,ಮೋಹಿನಿ, ಸುಧೀರ್ ದೇವಾಡಿಗ, ಸುಮನಾ, ಮೀನಾಕ್ಷಿ ನೆಲ್ಲ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಗೌಡ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಅಂಗು ಕಳಾರ, ಜಿತೇಶ್, ತಾರನಾಥ, ಉಮೇಶ್, ಜನಾರ್ಧನ ಸಹಕರಿಸಿದರು.