ಸ್ಫೋಟಕ ತುಂಬಿದ ಟ್ರಕ್ ಗೆ ಬೈಕ್ ಡಿಕ್ಕಿ: ಘೋರ ದುರಂತ, ಅರ್ಧ ಊರೇ ನೆಲಸಮ
ಪಶ್ಚಿಮ ಆಪ್ರಿಕಾದ ಘಾನಾ ದೇಶದ ರಾಜಧಾನಿ ಅಕ್ರಾದಲ್ಲಿ ಕಳೆದ ರಾತ್ರಿ ಉಂಟಾದ ಭೀಕರ ಸ್ಫೋಟದಲ್ಲಿ ಕನಿಷ್ಠ 17 ಮಂದು ಮೃತಪಟ್ಟಿದ್ದು, 59 ಮಂದಿ ಗಾಯಗೊಂಡಿದ್ದಾರೆ.
ಗುರುವಾರ ಘಾನದಲ್ಲಿ ಸಂಭವಿಸಿದ ಭಾರೀ ಸ್ಪೋಟದಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟಕಗಳನ್ನು ಸಾಗಿಸುತ್ತಿದ್ದ ಗಣಿಗಾರಿಕೆ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಕಟ್ಟಡಗಳೆಲ್ಲ ನೆಲಸಮವಾಗಿದೆ.
ನೈರುತ್ಯ ಘಾನಾದ ಅಪಿಯೇಟ್ ಎಂಬ ಸಣ್ಣ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸಾವಿನ ಸಂಖ್ಯೆಯ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಗಾಯಾಳುಗಳನ್ನು ಆಸ್ಪತ್ರೆ, ಚರ್ಚ್ ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಟ್ರಕ್ ತರ್ಕ್ವಾ ಮತ್ತು ಚಿರಾನೊದ ಚಿನ್ನದ ಗಣಿಗಳ ನಡುವೆ ಚಲಿಸುವಾಗ ಈ ಅಪಘಾತ ಸಂಭವಿಸಿದೆ.
ಹೆಚ್ಚಿನ ಗಾಯಾಳುಗಳನ್ನು ಹತ್ತಿರದ ಪಟ್ಟಣವಾದ ಬೊಗೊಸೊದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದ ಬಹುಭಾಗ ಈ ಭೀಕರ ಸ್ಪೋಟದಿಂದಾಗಿ ನೆಲಸಮವಾಗಿದೆ. ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ಟ್ರಕ್ ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಪಿಯಾಟ್ ನ ನಿವಾಸಿ ಆರೋನ್ ಆವುಸು ಹೇಳಿದ್ದಾರೆ.