ಶೀಘ್ರದಲ್ಲೇ ಕೊರೊನಾ ಲಸಿಕೆ ಮೆಡಿಕಲ್ ಸ್ಟೋರ್ ಗಳಲ್ಲಿ !!!

ನವದೆಹಲಿ : ಕೊರೋನ ಹಾವಳಿ ನಿಲ್ಲುವ ಹಾಗೆ ಕಾಣುವುದಿಲ್ಲ. ಏರುಗತಿಯಲ್ಲಿ ಏರುತ್ತಲೇ ಇದೆ. ಓಮಿಕ್ರಾನ್ ರೂಪಾಂತರಿ ಕೂಡಾ ಬಂದಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕೊರೋನ ನಿರೋಧಕ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

 

ಶೀಘ್ರವೇ ಮುಕ್ತ ಮಾರುಕಟ್ಟೆಗೆ ಕೋವಿಶೀಲ್ಡ್ ಮತ್ತು ‌ಕೋವ್ಯಾಕ್ಸಿನ್ ಲಸಿಕೆಗಳು ಪ್ರವೇಶ ಪಡೆಯಲಿದೆ. ಕೇಂದ್ರೀಯ ಔಷಧ ಪ್ರಾಧಿಕಾರ ತಜ್ಞರ ಸಮಿತಿ ಒಪ್ಪಿಗೆ ನೀಡಿದ್ದು, ಲಸಿಕೆ ತಯಾರಿಸುವ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕಂಪನಿಗಳ ವತಿಯಿಂದ ಔಷಧಿಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ.

ತುರ್ತು ಪರಿಸ್ಥಿತಿಯಲ್ಲಿ ಕೊರೊನಾ ನಿರೋಧಕ ಲಸಿಕೆ‌ ಬಳಕೆಗೆ ಅನುಮತಿ ನೀಡಲಾಗಿದೆ.ಮಾರುಕಟ್ಟೆಯಲ್ಲಿ ಇದನ್ನು ಮಾಡುವಂತಿಲ್ಲ. ಶೀಘ್ರವೇ ಮೆಡಿಕಲ್ ಸ್ಟೋರ್ ಗಳಲ್ಲಿಯೂ ಲಸಿಕೆ‌ ಲಭ್ಯವಾಗುವ ಸಾಧ್ಯತೆ ಇದೆ.

Leave A Reply

Your email address will not be published.