ಬಹಳ ವಿಶೇಷವಾಗಿ ಮದುವೆಯಾಗುತ್ತಿದೆ ಈ ಜೋಡಿ |ಅತಿಥಿಗಳ ಮನೆಗೆ ಬರಲಿದೆಯಂತೆ ಮದುವೆಯ ಬಾಡೂಟ| ಹೇಗೆ ಅಂತೀರಾ.. ಮದುವೆ ಪ್ಲಾನ್ ಕುರಿತು ಇಲ್ಲಿದೆ ವರದಿ
ಮದುವೆ ಬಗ್ಗೆ ಹಲವರಿಗೆ ಹಲವಾರು ಕಲ್ಪನೆಗಳಿರುತ್ತವೆ. ಆದರೆ ಈ ಕೊರೊನಾ ಕಾಲದಲ್ಲಿ ಸರಕಾರದ ನಿಯಮಗಳಿಂದ ಮದುವೆಗೆ ಇಂತಿಷ್ಟೇ ಜನ ಇರಬೇಕು ಎಂದು ನಿಯಮ ಮಾಡಿದೆ.
ಆದರೆ ಇಲ್ಲೊಂದು ಜೋಡಿಗೆ ತಾವು ಎಲ್ಲರ ಸಮ್ಮುಖದಲ್ಲೇ ಮದುವೆಯಾಗಬೇಕು ಎಂಬ ಆಸೆ ವ್ಯಕ್ತವಾಗಿದೆ. ಅದಕ್ಕಾಗಿ ಒಂದು ಒಳ್ಳೇ ಐಡಿಯಾ ಮಾಡಿದ್ದಾರೆ.
ಏನೆಂದರೆ ಈ ಮದುವೆಯಲ್ಲಿ ಸಂಬಂಧಿಕರು ಪರಿಚಯಸ್ಥರೆಲ್ಲ ಗೂಗಲ್ ಮೂಲಕ ಮೀಟ್ ಆಗ್ತಿದ್ದಾರೆ.
450 ಕ್ಕೂ ಹೆಚ್ಚು ಜನ ಗೂಗಲ್ ಮೂಲಕ ಸೇರಲಿದ್ದಾರೆ. ವೀಡಿಯೋ ಮೂಲಕ ಈ ಮದುವೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲಿದ್ದಾರೆ. ನಂತರ ಜ್ಯೋಮ್ಯಾಟೋ ಮೂಲಕ ಅವರೆಲ್ಲರ ಮನೆಗೆ ಊಟ ಕಳುಹಿಸಲಾಗುತ್ತದೆ.
ಕೋವಿಡ್ ರೂಲ್ಸ್ ಬ್ರೇಕ್ ಮಾಡದೆನೇ 450 ಕ್ಕೂ ಹೆಚ್ಚು ಮಂದಿಯ ಸಮ್ಮುಖದಲ್ಲಿ ತಮ್ಮ ಮದುವೆ ಮಾಡಿಕೊಳ್ಳಲು ಬಂಗಾಲ ಮೂಲದ ವಧು ವರರು ನಿರ್ಧರಿಸಿದ್ದಾರೆ. ಈ ಮಧುಮಕ್ಕಳಿಗೆ ಯಾರನ್ನೂ ಮಿಸ್ ಮಾಡದೇ ಮದುವೆಗೆ ಆಹ್ವಾನಿಸಲು ಆಸೆ.
ಇದೇ ಜನವರಿ 24 ರಂದು ನಡೆಯಬೇಕಾಗಿರುವ ಮದುವೆಗೆ, 450 ಕ್ಕೂ ಹೆಚ್ಚು ಜನ ಗೂಗಲ್ ಮೀಟ್ ಮೂಲಕ ಸೇರಲಿದ್ದಾರೆ. ವೀಡಿಯೋ ಮೂಲಕ ಈ ಮದುವೆಯ ಸಂಭ್ರಮವನ್ನು ಕಣ್ತುಂಬಿಕ್ಕೊಳ್ಳುತ್ತಾರೆ.
ಜ್ಯೋಮ್ಯಾಟೋ ಮೂಲಕ ಪರಿಚಯಸ್ಥರ, ಸಂಬಂಧಿಕರ ಮನೆಗೆ ಊಟ ತಲುಪಲಿದೆ.
ಇದು ತುಂಬಾ ಒಳ್ಳೆಯ ಮತ್ತು ಹೊಸ ಐಡಿಯಾ. ಇವರು ಹೇಳುವ ಕಡೆಗೆ ಮದುವೆ ಊಟವನ್ನು ತಲುಪಿಸುವ ಜವಾಬ್ದಾರಿ ನಮ್ಮದು. ಇದಕ್ಕಾಗಿ ಈಗಾಗಲೇ ನಾವು ವ್ಯವಸ್ಥೆ ಮಾಡಿದ್ದೇವೆ ಎಂದು ಜ್ಯೋಮ್ಯಾಟೋ ಕೆಲಸಗಾರರೊಬ್ಬರು ತಿಳಿಸಿದ್ದಾರೆ.