ತೈಲ ಶೇಖರಣ ಕೇಂದ್ರಗಳ ಬಳಿ ಶಂಕಿತ ಡ್ರೋನ್ ದಾಳಿ!! ಇಬ್ಬರು ಭಾರತೀಯರ ಸಹಿತ ಓರ್ವ ಸಾವು-ಹಲವರಿಗೆ ಗಾಯ
ಯುಎಇ ಯ ರಾಜಧಾನಿ ಅಬುಧಾಬಿಯ ತೈಲ ಸಂಗ್ರಹಣಾ ಕೇಂದ್ರದ ಬಳಿ, ತೈಲ ಟ್ಯಾಂಕರ್ ಗಳನ್ನು ಗುರಿಯಾಗಿಸಿ ಶಂಕಿತ ದ್ರೋನ್ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಭಾರತೀಯರು ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆಯೂ ಒಮ್ಮೆ ಇಂತಹ ದಾಳಿ ನಡೆದಿದ್ದು, ಯುಎಇ ಯ ಹಡಗನ್ನು ಹೌತಿಗಳು ವಶಪಡಿಸಿಕೊಂಡ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು, ಹಡಗು ವಶಪಡಿಸಿಕೊಂಡದ್ದನ್ನು ವಿಶ್ವ ಸಂಸ್ಥೆಯೂ ಖಂಡಿಸಿ, ಸಿಬ್ಬಂದಿಗಳ ಬಿಡುಗಡೆಗೆ ಒತ್ತಾಯಿಸಿದೆ.
ಇನ್ನು ಈ ದಾಳಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯ ಪ್ರಜೆಗಳಾಗಿದ್ದು, ಇನ್ನೊರ್ವ ಪಾಕಿಸ್ತಾನಿ ಪ್ರಜೆ ಸಹಿತ ಕೆಲವರು ಗಾಯಗೊಂಡಿದ್ದು, ಗಾಯಳುಗಳ ಗುರುತು ಪತ್ತೆ ಹಚ್ಚಬೇಕಿದೆ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.