ಎಟಿಎಂ ನಿಂದ ಹಣ ತೆಗೆಯುವಾಗ ಕೆಲವೊಂದು ಮುಂಜಾಗ್ರತಾ ಕ್ರಮ| ಎಟಿಎಂ ಮೆಷಿನ್ ನ ಹಸಿರು ಲೈಟಿನತ್ತ ಇರಲಿ ಗಮನ, ಇಲ್ಲದಿದ್ದರೆ ಅಪಾಯ ಖಂಡಿತ

ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಪ್ರಸ್ತುತ ಎಟಿಎಂ ಹಾಗೂ ಆನ್ಲೈನ್ ನಿಂದ ಹಣ ತೆಗೆಯುವುದು ಸುರಕ್ಷಿತವಲ್ಲ. ಆದರೆ ಎಟಿಎಂ ಗಳು ಹಣ ತೆಗೆಯುವ ಸಮಸ್ಯೆಗೆ ಪರಿಹಾರ ನೀಡುವುದರ ಜೊತೆಗೆ ಕಷ್ಟ ವನ್ನೂ ಹೆಚ್ಚಿಸಿದೆ. ಪ್ರತಿದಿನ ಒಂದಲ್ಲಾ ಒಂದು ಎಟಿಎಂ ವಂಚನೆಯ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತದೆ‌.

ಕೆಲವು ಎಚ್ಚರಿಕೆಯ ಕರೆಗಂಟೆಗಳು ಅಹಿತಕರ ಘಟನೆಯಿಂದ ನಮ್ಮನ್ನು ರಕ್ಷಿಸುತ್ತದೆ. ಅದರಂತೆ ಯಾವುದೇ ಎಟಿಎಂ ನಿಂದ ಹಣವನ್ನು ಹಿಂಪಡೆಯುವ ಮೊದಲು, ಆ ಯಂತ್ರವು ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. ಕಾರ್ಡ್ ಕ್ಲೋನಿಂಗ್ ನಿಂದ ಅಪಾಯ ಎದುರಾಗಬಹುದು. ಹಾಗಾಗಿ ವೈಯಕ್ತಿಕ ಮಾಹಿತಿಯನ್ನು ಹೇಗೆ ಕದಿಯಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಎಟಿಎಂ ಯಂತ್ರದಲ್ಲಿ ಕಾರ್ಡ್ ಹಾಕುವ ಸ್ಲಾಟ್ ನಿಂದ ಯಾವುದೇ ಗ್ರಾಹಕರ ಡೇಟಾವನ್ನು ಹ್ಯಾಕರ್ಸ್ ಗಳು ಕದಿಯಬಹುದಾದ ಅವಕಾಶವಿದೆ. ಹ್ಯಾಕರ್ಸ್ ಗಳು ಕಾರ್ಡಿನ ಸಂಪೂರ್ಣ ಮಾಹಿತಿಯನ್ನು ಸ್ಕ್ಯಾನ್ ಮಾಡುವ ಸಾಧನವನ್ನು ಎಟಿಎಂ ಯಂತ್ರದ ಕಾರ್ಡ್ ಸ್ಲ್ಯಾಟ್ ನಲ್ಲಿ ಇರಿಸುತ್ತಾರೆ. ಅದರ ನಂತರ ಅವರು ಬ್ಲೂಟೂತ್ ಅಥವಾ ಇತರ ಸಾಧನದ ಮೂಲಕ ಡೇಟಾವನ್ನು ಕದಿಯಲು ಯತ್ನಿಸುತ್ತಾರೆ.

ಹ್ಯಾಕರ್ಸ್ ಗಳಿಗೆ ನಿಮ್ಮ ಡೆಬಿಟ್ ಕಾರ್ಡ್ ಕದ್ದು ಬಳಸಬೇಕಾದರೆ ಅದರ ಪಿನ್ ಸಂಖ್ಯೆ ಗೊತ್ತಿರಬೇಕು‌. ಅದಕ್ಕೆಂದೇ ಹ್ಯಾಕರ್ಸ್ ಗಳು ಪಿನ್ ಸಂಖ್ಯೆಯನ್ನು ಕ್ಯಾಮೆರಾ ಮೂಲಕ ಟ್ರ್ಯಾಕ್ ಮಾಡಬಹುದು. ಈ ರೀತಿಯ ಸಮಸ್ಯೆಗಳಿಗೆ ಒಳಗಾಗಬಾರದು ಎಂದಾದರೆ ಎಟಿಎಂನಲ್ಲಿ ಪಿನ್ ನಮೂದಿಸುವಾಗ ಇನ್ನೊಂದು ಕೈಯಿಂದ ಅದನ್ನು ಮುಚ್ಚಲು ಪ್ರಯತ್ನಿಸಿ. ಹಾಗಾದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಚಿತ್ರ ಸೆರೆಯಾಗುವುದಿಲ್ಲ.

ಎಟಿಎಂ ಗೆ ಭೇಟಿ ನೀಡಿದಾಗ, ಯಂತ್ರದ ಕಾರ್ಡ್ ಸ್ಲಾಟ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಎಟಿಎಂ ಕಾರ್ಡ್ ಸ್ಲಾಟ್ ನ್ನು ಟ್ಯಾಂಪರ್ ಮಾಡಲಾಗಿದೆ ಎಂದು ನೀವು ತಿಳಿದುಕೊಂಡರೆ ಅಥವಾ ಸ್ಲಾಟ್ ಸಡಿಲವಾಗಿದ್ದರೆ ಅಥವಾ ದೋಷಪೂರಿತವಾಗಿದ್ದರೆ ಅದನ್ನು ಬಳಸಬೇಡಿ.ಕಾರ್ಡ್ ಸ್ಲಾಟ್ಗೆ ಕಾರ್ಡ್ ನ್ನು ಹಾಕುವಾಗ ಹಸಿರು‌ ದೀಪವನ್ನು ಪರಿಶೀಲಿಸಿ. ಸ್ಲಾಟ್ನಲ್ಲಿ ಗ್ರೀನ್ ಸಿಗ್ನಲ್ ಆನ್ ಆಗಿರುವಾಗ ಎಟಿಎಂ ಸುರಕ್ಷಿತವಾಗಿರುತ್ತದೆ. ಆದರೆ ಕೆಂಪು ಅಥವಾ ಬೇರೆ ಲೈಟ್ ಬಂದರೆ ಆ ಎಟಿಎಂ ಬಳಸಬೇಡಿ. ನಿಮ್ಮ ಸಣ್ಣ ತಪ್ಪು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.ಸ್ವಲ್ಪ ಅನುಮಾನ ಬಂದರೂ ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು. ಆದಷ್ಟು ಬೇಗನೇ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ತಿಳಿಸಬೇಕು.

Leave A Reply

Your email address will not be published.