ಪಿಜ್ಜಾ ತಿನ್ನಲು ಆಸೆಯಾದ ಅಜ್ಜಿ ಮಾಡಿಕೊಂಡ ಯಡವಟ್ಟು | ಜೀವಮಾನದ ಉಳಿತಾಯದ 11 ಲಕ್ಷ ಕಳೆದುಕೊಂಡು ಕಂಗಾಲಾದ ಅಜ್ಜಿ !
ಇತ್ತೀಚಿನ ಜನರ ಅಚ್ಚುಮೆಚ್ಚಿನ ತಿನಿಸು ಎಂದರೆ ಅದು ಪಿಜ್ಜಾ ಎಂದೇ ಹೇಳಬಹುದು. ಸಣ್ಣ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೂ ಕೂಡ ಪಿಜ್ಜಾವನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗೆಯೇ ಇಲ್ಲೊಬ್ಬ ವೃದ್ಧ ಮಹಿಳೆ ಆನ್ಲೈನ್ನಲ್ಲಿ ಪಿಜ್ಜಾ ಹಾಗೂ ಡ್ರೈ ಫ್ರೂಟ್ಸ್ ಆರ್ಡರ್ ಮಾಡುವಾಗ ಕಳೆದುಕೊಂಡ ಹಣವನ್ನು ವಾಪಾಸ್ ಪಡೆಯಲು ಪ್ರಯತ್ನಿಸಿದಾಗ ಸೈಬರ್ ವಂಚಕರು ಆಕೆಗೆ 11 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಅಂಧೇರಿಯ ಉಪನಗರ ನಿವಾಸಿಯಾಗಿರುವ ಮಹಿಳೆ ಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಹಣವನ್ನು ತನ್ನ ಫೋನ್ನಲ್ಲಿ ಪಾವತಿಸುವಾಗ 9,999 ಕಳೆದುಕೊಂಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ವೃದ್ಧೆ ತಾನೂ ಹಣವನ್ನು ಕಳುಹಿಸಿದ ನಂಬರ್ ಗೆ ಕರೆಮಾಡಿದ್ದಾಳೆ. ಆಗ ವಂಚಕ ಮಹಿಳೆಗೆ ಮೊಬೈಲ್ ಫೋನ್ನಲ್ಲೊಂದು ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಹೇಳಿದ್ದಾನೆ. ಆಗ ಮಹಿಳೆಯ ಮೊಬೈಲ್ ಆ್ಯಕ್ಸಸ್ ಅವರಿಗೆ ಸಿಕ್ಕಿದೆ. ಆಗ ಬ್ಯಾಂಕ್ ಖಾತೆ ವಿವರ, ಪಾಸ್ವರ್ಡ್ ಕುರಿತಾದ ಎಲ್ಲಾ ಮಾಹಿತಿ ವಂಚಕರಿಸಿಗೆ ಸಿಕ್ಕಿದೆ. ವಂಚಕ ಒಂದು ತಿಂಗಳ ನಡುವೆ ಮಹಿಳೆಯ ಬ್ಯಾಂಕ್ ಖಾತೆಯಿಂದ 11.78 ಲಕ್ಷವನ್ನು ವರ್ಗಾಯಿಸಿಕೊಂಡು ಡ್ರಾ ಮಾಡಿ ವಂಚಿಸಿದ್ದಾನೆ.
ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಕುರಿತಾಗಿ ತಿಳಿಯುತ್ತಿದ್ದಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ಬಿಕೆಸಿ ಸೈಬರ್ ಪೊಲೀಸ್ ಠಾಣೆಗೆ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 420 (ವಂಚನೆ) ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.