ಅನುಕಂಪ, ಮತ್ತಿತರ ಹುದ್ದೆಗಳಿಗೆ ಇನ್ನು ಮುಂದೆ ‘ಕಾರ್ಯಕ್ಷಮತೆ ಪರೀಕ್ಷೆ’ : ‘ಶಿಕ್ಷಣ ಇಲಾಖೆ ಸಿ ದರ್ಜೆ ನೌಕರ’ ರಿಗೆ ಪರೀಕ್ಷೆ ಪಾಸ್ ಕಡ್ಡಾಯ
ಬೆಂಗಳೂರು : ಅನುಕಂಪದ ಆಧಾರದ ಮೇಲೆ ಸೇರಿದಂತೆ ಕೆಲ ನೌಕರಿಗಳಿಗೆ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಹತೆಯ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಆಡಳಿತ ಅನುಭವ, ಗಣಕಯಂತ್ರದ ಜ್ಞಾನ, ಭಾಷಾ ಪರಿಣತಿ ಕೊರತೆ ಇವುಗಳ ಸಮಸ್ಯೆ ಉಂಟಾಗುತ್ತಿರೋದರಿಂದ ಇನ್ಮುಂದೆ ಶಿಕ್ಷಣ ಇಲಾಖೆಯ ಸಿ ದರ್ಜೆ ನೌಕರಿಗೆ ಕಾರ್ಯಕ್ಷಮತೆ ಪರೀಕ್ಷೆ ನಿಗದಿ ಮಾಡಲಾಗಿದೆ.
ಈ ಪರೀಕ್ಷೆಯನ್ನು ಪಾಸ್ ಮಾಡಿದರೆ ಮಾತ್ರ ಖಾಯಂ ಪೂರ್ವ ಸೇವಾವಧಿ ಘೋಷಣೆ ಆಗಲಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಿಕ್ಷಣ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಗೊಂಡಿರುವ ಹಾಗೂ ನಿಕೃಷ್ಟ ಕಾರ್ಯ ನಿರ್ವಹಣೆಯ ಸಿ ದರ್ಜೆ ನೌಕರಿಗೆ 100 ಅಂಕಗಳ ಕಾರ್ಯಕ್ಷಮತೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಖಾಯಂ ಪೂರ್ವ ಸೇವಾವಧಿ ಘೋಷಣೆಗೆ ಮುನ್ನ ಈ ಪರೀಕ್ಷೆ ಕಾರ್ಯಕ್ಷಮತೆ ಪರೀಕ್ಷೆಯನ್ನು ಕಡ್ಡಾಯವಾಗಿ ತೇರ್ಗಡೆಯಾಗಬೇಕು ಎಂದು ತಿಳಿಸಿದೆ.
ಈ ಪರೀಕ್ಷೆಯನ್ನು ಕಡತಗಳಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ನಮೂದಿಸದೇ ಮಂಡಿಸ್ತಾ ಇರೋದು, ಕಡತಗಳಲ್ಲಿ ಟಿಪ್ಪಣಿ ಸರಿಯಾಗಿ ಹಾಕದೇ ಇರೋದು, ಕಾಗುಣಿತ ದೋಷ, ಕಂಪ್ಯೂಟರ್ ಜ್ಞಾನದ ಕೊರತೆಯನ್ನು ಸರಿಪಡಿಸುವುದಕ್ಕಾಗಿ ಆಗಿದೆ.
ಈ ಪರೀಕ್ಷೆಯು ನೇಮಕ, ಇಲಾಖಾ ಪರೀಕ್ಷೆ ತೇರ್ಗಡೆ ಹೊಂದಿದವರಿಗೆ ಅನ್ವಯಿಸುವುದಿಲ್ಲ. ಆದರೆ ಅನುಕಂಪ ಮತ್ತಿತರ ನಿಯಮಗಳ ಮೇಲೆ ನೇಮಕಗೊಂಡಿರುವವರಿಗೆ ಕಡ್ಡಾಯವಾಗಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಆರ್ ವಿಶಾಲ್ ತಿಳಿಸಿದ್ದಾರೆ.