ಕೊರೋನಾ ಅಲೆಯ ಸಂದರ್ಭದಲ್ಲಿ ಭಾರತೀಯರ ನೆಚ್ಚಿನ ಸ್ನಾಕ್ ಯಾವುದು ಗೊತ್ತಾ?? | ಅದು ಬೇರಾವುದೂ ಅಲ್ಲ, ಡೋಲೋ 650 !! | ಮಾರಾಟದ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ ಈ ಮಾತ್ರೆ
ಕಳೆದ ಒಂದು ವರ್ಷದಲ್ಲಿ ತಲೆನೋವು, ದೇಹ ನೋವು ಮತ್ತು ಜ್ವರವನ್ನು ನಿವಾರಿಸಲು ನೀವು ಯಾವ ಮಾತ್ರೆ ಬಳಸಿದ್ದೀರಿ?? ನೆನಪಿಲ್ಲದಿದ್ದರೂ ಪರವಾಗಿಲ್ಲ. ನೀವು ಯಾವ ಮಾತ್ರೆ ಬಳಸಿರಬೇಕು ಎಂದು ನಾವು ನಿಮಗೆ ಹೇಳುತ್ತೇವೆ. ಒಂದೋ ನೀವು ಕ್ರೋಸಿನ್ ಅಥವಾ ಡೋಲೋ 650 ತೆಗೆದುಕೊಂಡಿರಬೇಕು. ಯಾಕೆಂದರೆ ಡೋಲೋ 650 ಕಳೆದ ಒಂದು ವರ್ಷದಲ್ಲಿ ಹೆಚ್ಚು ಬಳಕೆಯಾದ ಟ್ಯಾಬ್ಲೆಟ್ ಆಗಿದೆ.
567 ಕೋಟಿ ಮೌಲ್ಯದ ಡೋಲೋ 650 ಟ್ಯಾಬ್ಲೆಟ್ಗಳನ್ನು ಮಾರ್ಚ್ 2020 ರಿಂದ ಮಾರಾಟ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಮಾತ್ರೆಯನ್ನು ಕೊರೋನಾ ಅವಧಿಯಲ್ಲಿ ನೆಚ್ಚಿನ ‘ಸ್ನಾಕ್’ ಎಂದು ಕರೆಯಲಾಗುತ್ತಿದೆ. ಇದು ಒಂದು ವರ್ಷದಲ್ಲಿ ತುಂಬಾ ಮಾರಾಟಕ್ಕೆ ಒಳಗಾಗಿದೆ. ಕಳೆದ ವಾರ #Dolo650 ಒಂದು ಮೀಮ್ ಫೆಸ್ಟ್ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿತ್ತು. ಈ ಅವಧಿಯಲ್ಲಿ ಈ ಮಾತ್ರೆ ಏಕೆ ಇಷ್ಟೊಂದು ಬಳಕೆಯಾಗಿದೆ ಅಥವಾ ವೈದ್ಯರು ಏಕೆ ಈ ಮಾತ್ರೆ ತೆಗೆದುಕೊಳ್ಳುವಂತೆ ರೋಗಿಗಳಿಗೆ ಸೂಚಿಸಿದ್ದಾರೆ?? ಎಂಬುದನ್ನು ನೀವು ಯೋಚಿಸುತ್ತಿರಬಹುದು.
ಜನವರಿ 2020 ರಿಂದ ಪ್ಯಾರೆಸಿಟಮಾಲ್ ಮಾರಾಟವನ್ನು ನೋಡಿದರೆ, ಡೋಲೋ 650 ಮಾರಾಟದ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ. ಮಾರಾಟದ ವಿಷಯದಲ್ಲಿ, ಕ್ಯಾಲ್ಪಾಲ್ ಮತ್ತು ಸುಮೋ ಎಲ್ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿವೆ. ಭಾರತದಲ್ಲಿ ಪ್ಯಾರೆಸಿಟಮಾಲ್ನ ಒಟ್ಟು 37 ಬ್ರಾಂಡ್ಗಳಿವೆ, ಇವುಗಳ ಮಾರಾಟವು ದೇಶದ ವಿವಿಧ ಪ್ರದೇಶಗಳಲ್ಲಿ ಅತ್ಯಧಿಕವಾಗಿದೆ. ಡೋಲೋ 650 ಅನ್ನು ಬೆಂಗಳೂರಿನ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ ತಯಾರಿಸುತ್ತದೆ. ಮತ್ತೊಂದೆಡೆ, GSK ಫಾರ್ಮಾಸ್ಯುಟಿಕಲ್ಸ್ ಕ್ಯಾಲ್ಪೋಲ್ ಅನ್ನು ಉತ್ಪಾದಿಸುತ್ತದೆ ಮತ್ತು ಈ ಎರಡೂ ಮಾತ್ರೆಗಳನ್ನು ಸಾಮಾನ್ಯವಾಗಿ ರೋಗಿಗಳಿಗೆ ವೈದ್ಯರು ಶಿಫಾರಸು ಮಾಡುತ್ತಾರೆ.
ಡಿಸೆಂಬರ್ 2021 ರಲ್ಲಿ, ಡೋಲೋ 650, ರೂ. 28.9 ಕೋಟಿಗಳನ್ನು ಮಾರಾಟ ನಡೆಸಿದೆ. ಇದು ಕಳೆದ ವರ್ಷ ಇದೇ ತಿಂಗಳ ಮಾರಾಟಕ್ಕಿಂತ ಶೇ.61.45ರಷ್ಟು ಹೆಚ್ಚಾಗಿದೆ. ಆದರೆ ಅದರ ಹೆಚ್ಚಿನ ಮಾರಾಟವು ಏಪ್ರಿಲ್-ಮೇ 2021 ರಲ್ಲಿ ಎರಡನೇ ಕೊರೋನಾ ಅಲೆಯ ಸಂದರ್ಭದಲ್ಲಿ ನಡೆದಿದೆ. ಏಪ್ರಿಲ್ನಲ್ಲಿ ಇದರ ಮಾರಾಟ 48.9 ಕೋಟಿಗಳಷ್ಟಾಗಿದ್ದರೆ, ಮೇ ತಿಂಗಳಲ್ಲಿ ಅದು 44.2 ಕೋಟಿ ಗಳಿಸಿದೆ.