ಮಹಿಳೆಯ ಮೇಲೆ ಹಲ್ಲೆ : ಮುಕ್ವೆಯ ಅಬ್ದುಲ್ ಮುನಾಫ್ ವಿರುದ್ದ ಪೊಲೀಸರಿಗೆ ದೂರು

Share the Article

ಪುತ್ತೂರು :ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮುಕ್ವೆ ನಿವಾಸಿ ಅಬ್ದುಲ್ ಮುನಾಫ್ ವಿರುದ್ದ ಬೆಳ್ಳಾರೆ ಪೊಲೀಸರಿಗೆ ದೂರು ನೀಡಲಾಗಿದೆ.

ಪುತ್ತೂರಿನ ವಿನಯ ಎಂಬವರು ಚಂದ್ರಶೇಖರ ಎಂಬವರು ಶುಂಠಿ ಹಾಗೂ ಬಾಳೆ ಕೃಷಿ ಮಾಡುವ ಸಲುವಾಗಿ ಲೀಸ್‌ಗೆ ಪಡೆದುಕೊಂಡ ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ಆನೆಮಜಲು ಎಂಬಲ್ಲಿನ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ಮುಕ್ವೆಯ ಮುನಾಫ್ ಎಂಬಾತ ಇಬ್ಬರು ಅಪರಿಚಿತ ವ್ಯಕ್ತಿಗಳೊಂದಿಗೆ ಬಂದು ಈ ಜಮೀನು ನನಗೆ ಸಂಬಂಧಿಸಿದ್ದು,ನನ್ನ ಸ್ವಾಧೀನದಲ್ಲಿ ಇದೆ.ಇಲ್ಲಿ ನೀವು ಯಾಕೆ ಕೆಲಸ‌ಮಾಡುತ್ತೀರಿ ಎಂದು ಆಕ್ಷೇಪಿಸಿ ಜಾತಿ ನಿಂದನೆಗೈದು ಅವಾಚ್ಯವಾಗಿ ಬೈದು ಮೈ ಮೇಲೆ ಕೈ ಹಾಕಿ ಬೆನ್ನಿಗೆ ಹಲ್ಲೆ ನಡೆಸಿ ಮುಂದಕ್ಕೆ ನೋಡಿಕೊಳ್ಳುತ್ತೇನೆ,ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾರೆಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಲದೆ ಮುನಾಫ್ ವಿರುದ್ದ ಸ್ಥಳೀಯರು ಹಲವು ಆರೋಪಗಳನ್ನು ಮಾಡಿದ್ದಾರೆ.

ಗಡಿಪಾರಿಗೆ ದೂರು

ಸವಣೂರು-ಪುಣ್ಚಪ್ಪಾಡಿಯ ಗ್ರಾಮಗಳಿಗೆ ಮುನಾಫ್‌ನ ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡುವ ಹಾಗೂ ಕೋಮು ಗಲಭೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ವ್ಯಕ್ತಿಯನ್ನು ಈ ಎರಡೂ ಗ್ರಾಮಗಳಿಗೆ ಭೇಟಿ ಕೊಡದ ಹಾಗೆ ನಿರ್ಬಂಧಿತ ಆಜ್ಞೆಯನ್ನು ಅಥವಾ ಗಡಿಪಾರು ಆದೇಶವನ್ನು ನೀಡುವಂತೆ ಸವಣೂರು ಹಿಂ.ಜಾ.ವೇ.ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದೆ.

Leave A Reply