ಅತಿಥಿ ಉಪನ್ಯಾಸಕರ ವೇತನ 28ಸಾವಿರಕ್ಕೆ ಏರಿಕೆ- ಸಚಿವ ಅಶ್ವತ್ಥ ನಾರಾಯಣ
ಬೆಂಗಳೂರು: ಅತಿಥಿ ಉಪನ್ಯಾಸಕರ ವೇತನವನ್ನು 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ ಮಾಡಲಾಗಿದ್ದು 13 ಸಾವಿರ ಇರುವವರಿಗೆ 32 ಸಾವಿರ ನೀಡಲಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ವಕ್ರ್ಲೋಡ್ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು ಅನೇಕ ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆ ಬಗ್ಗೆ ವರದಿ ನೀಡಲು ಸಿಎಂ ಸಮಿತಿ ನೇಮಕ ಮಾಡಿದ್ದರು. ಕುಮಾರ್ ನಾಯಕ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ವರದಿಯನ್ನು ಸಿಎಂ ಗಮನಿಸಿದ್ದು, ವರದಿಯನ್ನು ಅನುಷ್ಠಾನ ಮಾಡಲು ಸಿಎಂ ಒಪ್ಪಿದ್ದಾರೆ ಎಂದರು.
5 ವರ್ಷ ಮೇಲ್ಪಟ್ಟು ಸೇವೆ ಮಾಡಿದ ಯುಜಿಸಿ ಕ್ವಾಲಿಫಿಕೇಶನ್ ಇರುವವರಿಗೆ 32 ಸಾವಿರ ಕೊಡಲಾಗುವುದು 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸದ ಯುಜಿಸಿ ಕ್ವಾಲಿಫಿಕೇಶನ್ ಇರುವ ಅತಿಥಿ ಉಪನ್ಯಾಸಕರಿಗೆ 30 ಸಾವಿರ, 5 ವರ್ಷ ಸೇವೆ ಹೆಚ್ಚು ಸೇವೆ ಸಲ್ಲಿಸಿದ ಯುಜಿಸಿ ಕ್ವಾಲಿಫಿಕೇನ್ ಇಲ್ಲದವರಿಗೆ 28 ಸಾವಿರ, 5 ವರ್ಷ ಸೇವೆ ಇಲ್ಲದ ಯುಜಿಸಿ ಕ್ವಾಲಿಫಿಕೇಶನ್ ಇಲ್ಲದವರಿಗೆ 26 ಸಾವಿರ ವೇತನ ನೀಡಲಾಗುವುದು . ಪ್ರತಿ ತಿಂಗಳು 10 ರಂದು ವೇತನ ನೀಡಲಾಗುವುದು ಎಂದು ಸಚಿವರು ವಿವರಿಸಿದರು.