ಇಡೀ ವಿಶ್ವವೇ ನನ್ನ ಮನೆ ಎಂಬ ಉದಾತ್ತ ಚಿಂತನೆಯನ್ನು ಹಿಂದೂ ಧರ್ಮವೇ ವಿಶ್ವಕ್ಕೆ ನೀಡಿದೆ !! – ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ
ಮಂಗಳೂರಿನ ಬೊಂದೆಲ್ನಲ್ಲಿರುವ ಮಹಾತ್ಮ ಗಾಂಧಿ ಸೆಂಟಿನರಿ ಪಿ ಯು ಕಾಲೇಜಿನಲ್ಲಿ “One Humanity Many Paths” ಎಂಬ ವಿಶೇಷ ಕಾರ್ಯಕ್ರಮ ದಿನಾಂಕ 12 ಜನೆವರಿ 2022 ರಂದು ಆಯೋಜನೆಯನ್ನು ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸನಾತನ ಸಂಸ್ಥೆಯ ಸೌ. ಲಕ್ಷ್ಮಿ ಪೈ ಇವರನ್ನು ಆಹ್ವಾನಿಸಲಾಗಿತ್ತು. ಬೋಂದೆಲ್ ಚರ್ಚ್ ನ ಫಾದರ್ ಗೊನ್ಸಾಲ್ವಿಸ್ ಇವರು ಕ್ರೈಸ್ತ ಧರ್ಮದ ಪ್ರತಿನಿಧಿಯಾಗಿ ಹಾಗೂ ಶಂಶಾದ್ ಇವರು ಇಸ್ಲಾಂ ನ ಪ್ರತಿನಿಧಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸೌ. ಲಕ್ಷ್ಮಿ ಪೈಯವರು ತಮ್ಮ ಪ್ರವಚನದಲ್ಲಿ ಸನಾತನ ಹಿಂದೂ ಧರ್ಮವು ಅನಾದಿ ಮತ್ತು ಅನಂತ ವಾಗಿದೆ. ಇಡೀ ವಿಶ್ವವೇ ನನ್ನ ಮನೆ ಎಂಬ ಉದಾತ್ತ ಚಿಂತನೆಯನ್ನು ಹಿಂದೂ ಧರ್ಮವೇ ವಿಶ್ವಕ್ಕೆ ನೀಡಿದೆ. ಸರ್ವೇಜನಾಃ ಸುಖಿನೋ ಭವಂತು ಎಂಬುದು ಭಾರತೀಯ ಪ್ರಾಚೀನ ಋಷಿ-ಮುನಿಗಳು ಪ್ರಾರ್ಥನೆಯಾಗಿದೆ. ಪುಣ್ಯಭೂಮಿ ಭಾರತವು ಎಲ್ಲ ಧರ್ಮಗಳಿಗೆ ಆಶ್ರಯ ನೀಡಿದ ತಾಣವಾಗಿದೆ. ಪ್ರತಿಯೊಬ್ಬರು ಧರ್ಮಾಚರಣೆಯನ್ನು ಮಾಡಿ ಸಾತ್ತ್ವಿಕ ಸಮಾಜವನ್ನು ಕಟ್ಟುವುದು ಕಾಲದ ಅವಶ್ಯಕತೆಯಾಗಿದೆ ಎಂದು ತಿಳಿಸಿದರು.
ಕ್ರೈಸ್ತ ಹಾಗೂ ಇಸ್ಲಾಂ ಧರ್ಮದ ಪ್ರತಿನಿಧಿಗಳು ತಮ್ಮ ವಿಚಾರವನ್ನು ಮಂಡಿಸಿದರು. ಸುಮಾರು 400 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡಿದ್ದಾರೆ.
?ಶ್ರೀ ವಿನೋದ್ ಕಾಮತ್