ಚೆನ್ನಾವರ : ಮಸೀದಿಯ ಗೌರವಕ್ಕೆ ದಕ್ಕೆ ತರುವ ರೀತಿಯಲ್ಲಿ ಫೋಟೋ ದುರ್ಬಳಕೆ ಇಬ್ಬರ ವಿರುದ್ದ ಪೊಲೀಸರಿಗೆ ದೂರು
ಸವಣೂರು : ಐತಿಹಾಸಿಕ ಹಿನ್ನೆಲೆಯುಳ್ಳ ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿಗೆ ಪ್ರವೇಶಿಸಿ ಮಸೀದಿಯ ಮುಂಭಾಗದಲ್ಲಿರುವ ಮಸೀದಿಯ ದೀಪವನ್ನು ಬೆಳಗಿಸಿ ಮಸೀದಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಅದರ ಫೋಟೋ ದುರ್ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಇಬ್ಬರು ಕಿಡಿಗೇಡಿಗಳ ವಿರುದ್ಧ ಜಮಾಅತ್ ಕಮಿಟಿ ಅಧ್ಯಕ್ಷರು ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.
ಜುಮಾ ಮಸೀದಿ ಐತಿಹಾಸಿಕ ಚೆನ್ನಾವರ ಹಿನ್ನೆಲೆಯುಳ್ಳದ್ದಾಗಿದ್ದು ಇಲ್ಲಿ ವಿದ್ಯುದ್ದೀಪ ಬರುವ ಮೊದಲು ದೀಪದ ಬೆಳಕಿನಲ್ಲಿ ನಮಾಜ್ ಮಾಡುತ್ತಿದ್ದರು.
ಅಂದಿನಿಂದ ನಡೆದುಕೊಂಡು ಬಂದ ದೀಪ ಬೆಳಗಿಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ.
ಆದರೆ ಹೊತ್ತಲ್ಲದ ಹೊತ್ತಿನಲ್ಲಿ ಮಸೀದಿಗೆ ಪ್ರವೇಶಿಸಿದ ಚೆನ್ನಾವರ ಜಮಾಅತಿಗೊಳಪಟ್ಟ ಇಸ್ಮಾಯಿಲ್ ಹನೀಫಿ ಹಾಗೂ ಅಬೂಬಕ್ಕರ್ ಮದನಿ ಎಂಬವರು ಮುಸ್ಸಂಜೆಯ ವೇಳೆ ಯಾರೂ ಮಸೀದಿಯಲ್ಲಿ ಇಲ್ಲದ ಸಮಯದಲ್ಲಿ ಮಸೀದಿಗೆ ಬಂದು ಮಸೀದಿಯ ಮುಂಭಾಗದಲ್ಲಿದ್ದ ದೀಪವನ್ನು ಬೆಳೆಗಿಸಿದ್ದಾರೆ.
ಬಳಿಕ ಅದರ ಫೋಟೋ ತೆಗೆದು ಮಸೀದಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಬರೆದು ಸಾಮಾಜಿಕ ಹರಿಯಬಿಟ್ಟಿದ್ದಾರೆ.