ಸವಣೂರಿನಲ್ಲಿ ಕಡಬ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಒತ್ತಡ ನಿವಾರಣೆ, ಮಾನಸಿಕ ಧೈರ್ಯ ಹಾಗೂ ಜೀವನೋಲ್ಲಾಸ ವೃದ್ದಿಸಲು ಕ್ರೀಡೆ ಪೂರಕ – ಕೆ.ಸೀತಾರಾಮ ರೈ

 

ಸವಣೂರು : ನೆಹರು ಯುವ ಕೇಂದ್ರ ಮಂಗಳೂರು,ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ.,ಕಡಬ ತಾಲೂಕು ಯುವಜನ ಒಕ್ಕೂಟ ,ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಸವಣೂರು ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಜ.12ರಂದು ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಮಾತನಾಡಿ,ಕ್ರೀಡೆಯಿಂದ ಆರೋಗ್ಯ ವೃದ್ದಿಯಾಗುತ್ತದೆ.ಒತ್ತಡ ನಿವಾರಣೆ, ಮಾನಸಿಕ ಧೈರ್ಯ ಹಾಗೂ ಜೀವನೋಲ್ಲಾಸವನ್ನು ಹೆಚ್ಚಿಸುವ ಸಲುವಾಗಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದು ಆವಶ್ಯಕ ಎಂದರು.

ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ‌ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ,ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುದರ ಜತೆಗೆ ದುಶ್ಚಟಗಳಿಂದ ದೂರವಿರಲು ಸಾಧ್ಯವಾಗುತ್ತದೆ.ಸತತ ಪ್ರಯತ್ನದಿಂದ ಯಾವುದೇ ಕ್ಷೇತ್ರದಲ್ಲೂ ಯಶಸ್ಸುಗಳಿಸಲು ಸಾಧ್ಯ ಎಂದರು.

ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ,ಸವಣೂರು ವಿದ್ಯಾರಶ್ಮಿ ಪದವಿ ಕಾಲೇಜಿನ ಪ್ರಾಚಾರ್ಯೆ ರಾಜಲಕ್ಷ್ಮಿ ರೈ,ವಿವಿಧ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಮಾಮಚ್ಚನ್ ಸವಣೂರು,ಶಿವಪ್ರಸಾದ್ ಆಳ್ವ,ಮೋನಪ್ಪ ಪಟ್ಟೆ,ರಬಾಲಕೃಷ್ಣ ಕೆ ಸವಣೂರು,ಪೂರ್ಣಿಮಾ,ಶ್ರೇಯಸ್ ರೈ ಅಲೆಕ್ಕಾಡಿ,ರಂಗನಾಥ್ ಕಾಣಿಯೂರು ಮೊದಲಾದವರಿದ್ದರು.

ವಿದ್ಯಾರಶ್ಮಿ ಕಾಲೇಜಿನ ಉಪನ್ಯಾಸಕ ವೆಂಕಟ್ರಮಣ,ಯುವಕ ಮಂಡಲದ ಸದಸ್ಯರಾದ ಪ್ರಜೀತ್ ರೈ ಸೂಡಿಮುಳ್ಳು ,ಆದರ್ಶ ಜೆ.ರೈ,ಪುತ್ತೂರು ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು ಅತಿಥಿಗಳನ್ನು ಗೌರವಿಸಿದರು.

ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ,ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಜಿತಾಕ್ಷ ಜಿ.ವಂದಿಸಿದರು.ಯುವಕ ಮಂಡಲದ ಮಾರ್ಗದರ್ಶಕ ಗಿರಿಶಂಕರ ಸುಲಾಯ ಕಾರ್ಯಕ್ರಮ ನಿರೂಪಿಸಿದರು.

ಹುಡುಗರಿಗೆ ಕಬಡ್ಡಿ,ವಾಲಿಬಾಲ್, ಹಗ್ಗ ಜಗ್ಗಾಟ,ಹುಡುಗಿಯರಿಗೆ ತ್ರೋಬಾಲ್,ಹಗ್ಗ ಜಗ್ಗಾಟ,ವೈಯಕ್ತಿಕ 100 ಮೀಟರ್ ಓಟ, ಗುಂಡೆಸೆತ,ದೂರ ಜಿಗಿತ,ಎತ್ತರ ಜಿಗಿತ ,ಗುಡ್ಡಗಾಡು ಓಟ ಮೊದಲಾದ ಸ್ಪರ್ಧೆಗಳು ನಡೆಯಿತು‌.

Leave A Reply

Your email address will not be published.