ಬೆಳ್ತಂಗಡಿ: ಶಿಶಿಲ ಗ್ರಾಮದಲ್ಲಿ ನಡೆಯುತ್ತಿದೆಯಂತೆ ಕೊರಗಜ್ಜನ ವೇಷ ಧರಿಸಿ ಹಣ ಲೂಟುವ ದಂಧೆ!! ಪಂಚಾಯತ್ ಮುಖಂಡನೇ ಪ್ರಕರಣದ ಸೂತ್ರಧಾರಿ-ದಲಿತ ವ್ಯಕ್ತಿ ಪಾತ್ರಧಾರಿ
ಬೆಳ್ತಂಗಡಿ: ತಾಲೂಕಿನ ಶಿಶಿಲ ಗ್ರಾಮದಲ್ಲಿ ಕೊರಗಜ್ಜನ ವೇಷ ಧರಿಸಿ ಹಣ ಲೂಟುವ ದಂಧೆಯೊಂದು ಕಳೆದ ಕೆಲ ಸಮಯಗಳಿಂದ ಕಾರ್ಯಾಚರಿಸುತ್ತಿದ್ದೂ, ದಲಿತ ವ್ಯಕ್ತಿಗೆ ಗ್ರಾಮ ಪಂಚಾಯತ್ ಮುಖಂಡನೋರ್ವ ವೇಷ ಹಾಕಿಸುತ್ತಿದ್ದಾನೆ ಎಂಬ ಸುದ್ದಿಯ ಬಗ್ಗೆ ಪತ್ರಿಕೆಯೊಂದು ವರದಿ ಬಿತ್ತರಿಸಿದೆ.
ದೈವದ ವೇಷ ತೊಟ್ಟ ದಲಿತ ವ್ಯಕ್ತಿ ತನಗೆ ಆವೇಶ ಬಂದಂತೆ ನಂಬಿಸಿ, ಕಷ್ಟ ಪರಿಹಾರಕ್ಕೆ ಬರುವ ಮುಗ್ಧ ಭಕ್ತರಿಂದ ಹಣ ಪೀಕಿಸಲಾಗುತ್ತಿದೆ ಎಂಬ ವರದಿಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಪ್ರಾರಂಭವಾಗಿದೆ.
ಇದೊಂದು ಅವಹೇಳನ, ಕೊರಗಜ್ಜನ ಕಾರ್ಣಿಕ ಹಾಗೂ ಕ್ಷೇತ್ರದ ಹೆಸರನ್ನು ಹಾಳು ಮಾಡಲು ಈ ರೀತಿ ವರದಿ ಬಿತ್ತರಿಸಲಾಗಿದೆ ಎಂದು ಕೆಲ ಭಕ್ತರು ತಮ್ಮ ಆಕ್ರೋಶವನ್ನೂ ಹೊರಹಾಕಿದ್ದಾರೆ.
ಈ ಬಗ್ಗೆ ಸಂಬಂಧ ಪಟ್ಟವರು ಸೂಕ್ತ ಸ್ಪಷ್ಟನೆ ಕೊಡದೇ ಹೋದಲ್ಲಿ, ಇದೊಂದು ದಂಧೆ ಎಂದೇ ನಂಬುವ ಸಾಧ್ಯತೆಗಳಿದ್ದು, ಸ್ಪಷ್ಟಿಕರಣದ ಬಳಿಕ ಸತ್ಯಾಂಶ ಹೊರಬರಲಿದೆ.