ಆದಾಯ ತೆರಿಗೆ ರಿಟನ್ಸ್ ಸಲ್ಲಿಸುವ ಕೊನೆಯ ಗಡುವನ್ನು ವಿಸ್ತರಿಸಿದ ಕೇಂದ್ರ ಸರ್ಕಾರ |ಕೊನೆಯ ದಿನಾಂಕ ಹೀಗಿದೆ..
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ಗಡುವನ್ನು ಈ ಹಿಂದೆ ಘೋಷಿಸಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕದ ದೆಸೆಯಿಂದ ವೈಯಕ್ತಿಕ ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ.
ತೆರಿಗೆದಾರರಿಗೆ 2020-21ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139 (1) ರ ನಿಬಂಧನೆಗಳ ಪ್ರಕಾರ ಮಾರ್ಚ್15, 2022ಕ್ಕೆ ವಿಸ್ತರಿಸಿದೆ ಎಂದು ಇಲಾಖೆ ನಿನ್ನೆ ಆದೇಶ ನೀಡಿದೆ.
ಇದಕ್ಕೂ ಮುನ್ನ ಜುಲೈ 31,2021ರ ಬದಲಿಗೆ ಸೆಪ್ಟೆಂಬರ್ 30, 2021 ರ ತನಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.ಇದೀಗ ಎರಡು ತಿಂಗಳು ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. ಇದಲ್ಲದೆ, ಜೂನ್ 7 ರಂದು ಆದಾಯ ತೆರಿಗೆ ಕಟ್ಟಲು ಹೊಸ ವೆಬ್ ತಾಣ (http://incometax.gov.in) ವನ್ನು ಇಲಾಖೆ ಪರಿಚಯಿಸಿದೆ.
ಮೂಲ ತೆರಿಗೆ ಪಾವತಿ ಮಿತಿಯ ಪ್ರಕಾರ 5 ಲಕ್ಷ ರೂ.ತನಕ ತೆರಿಗೆ ಪಾವತಿಸುವಂತಿಲ್ಲ, ಇನ್ನೊಂದಿಷ್ಟು ಉಳಿತಾಯ ತೋರಿಸಿದರೆ 9 ಲಕ್ಷ ರು ತನಕ ತೆರಿಗೆ ಕಟ್ಟದೆ ಇರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿತ್ತು.
ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, ಮೂಲ ಮಿತಿಯನ್ನು ಬದಲಾಯಿಸಿಲ್ಲ.ಆದಾಯ ತೆರಿಗೆ ಪಾವತಿ ಮಾಡಲು ಆಧಾರ್, ಪ್ಯಾನ್ ಕಾರ್ಡ್ ಎರಡರಲ್ಲಿ ಒಂದು ಹೊಂದಿದ್ದರೆ ಸಾಕು, ಎರಡು ಕಡ್ಡಾಯ ಎಂಬ ನಿಯಮವನ್ನು ಸಡಿಲಗೊಳಿಸಲಾಗಿದೆ.ಒಂದು ಬ್ಯಾಂಕಿನ ಒಂದು ಖಾತೆಯಿಂದ ವಾರ್ಷಿಕ 1 ಕೋಟಿ ರು ವಿಥ್ ಡ್ರಾ ಮಾಡಿದರೆ ಶೇ 2ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ.