ವೀಕೆಂಡ್ ಕರ್ಫ್ಯೂ ವಾಹನ ತಡೆದ ಪೊಲೀಸರು | ಗಾಡಿ ಜೊತೆ ಹೆಂಡ್ತಿನೂ ಸೀಜ್ ಮಾಡಿ ಎಂದ ವಾಹನದ ಮಾಲಕ

Share the Article

ರಾಜ್ಯಾದ್ಯಂತ ವೀಕೆಂಡ್ ಕರ್ಮ್ಯೂ ಜಾರಿಯಲ್ಲಿದ್ದು ನಗರದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ. ತುರ್ತು ಕೆಲಸ ಹೊರತುಪಡಿಸಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಚಿಕನ್ ಕೊಳ್ಳಲು ಬಂದ ವ್ಯಕ್ತಿಯೊಬ್ಬರು ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ಚಿಕನ್ ಕೊಳ್ಳಲು ಬಂದಿದ್ದ ಮಂಜುನಾಥ್ ಅವರ ಗಾಡಿಯನ್ನು ಪೊಲೀಸರು ತಡೆದಿದ್ದಾರೆ.

ಈ ವೇಳೆ ಮಂಜುನಾಥ್‌ ‘ಚಿಕನ್ ಕೊಳ್ಳಲು ಬಂದಿದ್ದ ಸರ್, ಬಿಟ್ಟಿಡಿ ಎಂದಿದ್ದಾರೆ. ತರಕಾರಿ ತರೋಕೆ ಅವಕಾಶ ಕೊಟ್ಟಿದ್ದಾರೆ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಆದರೆ ಪೊಲೀಸರು ಗಾಡಿ ಸೀಜ್ ಮಾಡಲು ಮುಂದಾಗಿದ್ದಾರೆ.

ಇದರಿಂದ ಕೋಪಗೊಂಡ ಮಂಜುನಾಥ್‌ ನನ್ನನ್ನು ಮಾತ್ರವಲ್ಲ , ಮನೆಗೆ ಹೋಗಿ ಹೆಂಡ್ತಿ ಮಕ್ಕಳನ್ನೂ ಕರ್ಕೊಂಡು ಬರ್ತಿನಿ ಅವನ್ನೂ ಸೇರಿಸಿ ಎಲ್ಲಾನೂ ಸೀಜ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಜುನಾಥ್ ರಂಪಾಟ ನೋಡಿ ಪೊಲೀಸರು ಕೊನೆಗೂ ಬಿಟ್ಟು ಕಳುಹಿಸಿದ್ದಾರೆ.

Leave A Reply