ಸತ್ತ ಜಿರಳೆಗಳ ಮೇಲೆ ಮೂಡಿದ ಕಲಾವಿದೆಯ ಕೈಚಳಕದ ಚಿತ್ರ, ವಿಚಿತ್ರ ಆದರೂ ಇದು ಸತ್ಯ!

Share the Article

ಫಿಲಿಪಿನ್ : ನಾವು ಹಲವಾರು ಕಲಾವಿದರನ್ನು ನೋಡಿದ್ದೇವೆ. ಹಾಗೆಯೇ ಈ ಕಲಾವಿದರಿಗೆ ವಿವಿಧ ರೀತಿಯ ಪ್ರತಿಭೆಗಳು ಇರುತ್ತವೆ. ಆದರೆ ಇಲ್ಲೊಬ್ಬ ವಿಚಿತ್ರ ಕಲಾವಿದೆ ಇದ್ದಾಳೆ‌. ಈಕೆ ಸತ್ತ ಜಿರಳೆಗಳ ಮೇಲೆ ಕಲಾಕೃತಿಗಳನ್ನು ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದಾಳೆ. ಈ ಮೂಲಕ ಈಗ ಸುದ್ದಿಯಲ್ಲಿದ್ದಾರೆ.

ಈ ಕಲಾವಿದೆಯ ಹೆಸರು ಬ್ರೆಂಡಾ ಡೆಲ್ಗಾಡೊ ( 30 ವರ್ಷ). ಈಕೆ ವಿನ್ಸೆಂಟ್ ವ್ಯಾನ್ ಗಾಗ್ ರವರ ‘ ಸ್ಟಾರಿ ನೈಟ್ ‘ ಸೇರಿದಂತೆ ಹಲವು ಕಲಾ ಕೃತಿಗಳನ್ನು ಚಿತ್ರಿಸಿದ್ದಾಳೆ.

“ನಾನು ಕೆಲಸ ಮಾಡುವ ಜಾಗದಲ್ಲಿ ಗುಡಿಸುತ್ತಿದ್ದಾಗ ಸತ್ತ ಜಿರಳೆಗಳನ್ನು ಕಂಡು, ಅವುಗಳ ಮೀಸೆಗಳನ್ನು ಕಂಡು ಏನಾದರೂ ವಿಶೇಷತೆಯನ್ನು ಮಾಡಬೇಕು ಎಂದು ಮನಸ್ಸಾಯಿತು. ನನ್ನೊಂದಿಗೆ ನನ್ನ ಸಹ ಕಲಾವಿದರು ಕೂಡಾ ನನಗೆ ಸಹಾಯ ಮಾಡಿದ್ದರಿಂದ ಜಿರಳೆಗಳ ಮೇಲೆ ಕಲಾಕೃತಿ ಮೂಡಿಸಲು ಸಹಾಯವಾಯಿತು” ಎಂದು ಬ್ರೆಂಡಾ ಹೇಳಿದ್ದಾರೆ.

Leave A Reply