ಕಾರಣಿಕ ಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ
ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕಾರಣಿಕ ಕ್ಷೇತ್ರ ಶ್ರೀಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಚಕ್ರವರ್ತಿ ಕೊಡಮಣಿತ್ತಾಯ ದೈವದ ಬ್ರಹ್ಮಕಲಶೋತ್ಸವ ಫೆಬ್ರವರಿ 6-7 ರಂದು ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಮಲೋಚನಾ ಸಭೆ ಜ.9ರಂದು ದೈಪಿಲದಲ್ಲಿ ನಡೆಯಿತು.
ಸಭೆಯಲ್ಲಿ ಕಾರ್ಯಕ್ರಮದ ಕುರಿತಾಗಿ ಪ್ರದೀಪ್ ಆರ್ ಗೌಡ ಅರುವಗುತ್ತು ಅವರು ಸವಿವರವಾಗಿ ವಿವರಿಸಿದರು.ಕೋವಿಡ್ ನಿಯಮಾವಳಿ ಹಾಗೂ ಸರಕಾರದ ಸೂಚನೆಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಸಲಾಗುವುದು.
ಕಾರ್ಯಕ್ರಮದ ಅಂಗವಾಗಿ ವಿವಿಧ ಸಮಿತಿಗಳನ್ನು ಸಭೆಯಲ್ಲಿ ರಚಿಸಲಾಯಿತು.
ಚಂದ್ರಕಲಾ ಜಯರಾಮ್ ಅರುವಗುತ್ತು, ವಚನ ಪ್ರದೀಪ್,
ರಾಮಣ್ಣ ಗೌಡ ಖಂಡಿಗ, ಶೇಖರ ಗೌಡ ಅಂಬುಲ, ಶೇಖರ ಗೌಡ ಗೌಡಮನೆ, ಕುಶಾಲಪ್ಪ ಗೌಡ ಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಾರ್ವಾಕ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ದೈಪಿಲ ಕ್ರೀಡಾ ಸೇವಾ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ, ವಿಜಯ ಕುಮಾರ್ ಸೊರಕೆ, ಪ್ರಕಾಶ್ ಅರುವ, ಕೃಷ್ಣಪ್ಪ ಗೌಡ ಕೆಳಗಿನಕೇರಿ, ಕುಶಾಲಪ್ಪ ಗೌಡ ದೈಪಿಲ, ವಿಶ್ವನಾಥ ಅಂಬುಲ, ಪರಮೇಶ್ವರ ಮೀಯೊಳ್ಪೆ ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.