ಆತ ತನ್ನ ಮುದ್ದಿನ ನಾಯಿಯ ಬರ್ತ್ ಡೇಗೆ ಖರ್ಚು ಮಾಡಿದ್ದು ಬರೋಬ್ಬರಿ 7 ಲಕ್ಷ ರೂಪಾಯಿ | ಪಾರ್ಟಿಯಲ್ಲಿದ್ದ ಮೂವರ ಬಂಧನ !
ಗಾಂಧಿನಗರ : ನನ್ನ ಮುದ್ದಿನ ನಾಯಿಯ ಬರ್ತಡೇಗೆ ಆತ ಬರೊಬ್ಬರಿ ಏಳು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದ. ಆದರೆ ನಾಯಿಯ ಹುಟ್ಟು ಹಬ್ಬ ಆಚರಣೆ ಮಾಡಿದ ಆತನೂ ಸೇರಿ ಒಟ್ಟು ಮೂವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಅಹ್ಮದಾಬಾದ್ ನ ನವ ನರೋಡಾದ ನಿವಾಸಿ ಚಿರಾಗ್ ಆಲಿಯಾಸ್ ದಾಗೊ ಮಿನೇಶ್ಭಾ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಸ್ವಂತ ಪಾನ್ ಪಾರ್ಲರ್ ಇಟ್ಟುಕೊಂಡಿದ್ದ.
ಈತ ತನ್ನ ಪೊಮೆರಿಯನ್ ನಾಯಿ ( ಆಯಬಿ)ಯ ಹುಟ್ಟುಹಬ್ಬವನ್ನು ಪಾರ್ಟಿ ಪ್ಲಾಟ್ ನಲ್ಲಿರುವ ನಿಕೋಲೆಯಲ್ಲಿ ಏರ್ಪಡಿಸಿದ್ದ.
ಈ ಹುಟ್ಟುಹಬ್ಬಕ್ಜೆ ಪಟೇಲ್ ಸರಿಸುಮಾರು 7 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆ. ಈ ಅದ್ಧೂರಿ ಪಾರ್ಟಿಗೆ ತನ್ನ ಸಂಬಂಧಿಕರನ್ನು ಕೂಡಾ ಆಹ್ವಾನಿಸಿದ್ದ. ಆದರೆ ಯಾರೂ ಕೂಡಾ ಮಾಸ್ಕ್ ಹಾಕದೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು, ಈ ಸಮಾರಂಭದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋದಲ್ಲಿ ಇತರರೊಂದಿಗೆ ಚಿರಾಗ್ ಅಲಿಯಾಸ್ ಡಾಗೋ ಪಟೇಲ್, ಊರ್ವಶಿ ಪಟೇಲ್, ದಿವ್ಯೇಶ್ ಮೆಹ್ರಿ ಮಾಸ್ಕ್ ಧರಿಸದೇ ಪಾಲ್ಗೊಂಡಿರುವುದು ದಾಖಲಾಗಿತ್ತು. ವೀಡಿಯೋ ವೀಕ್ಷಿಸಿದ ಪೊಲೀಸರು ಕೋವಿಡ್ ನಿಯಮ ಉಲ್ಲಂಘನೆ ಆರೋಪದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆ ಅಡಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಮೂವರನ್ನು ಬಂಧಿಸಿದ್ದಾರೆ.