ವೆರೈಟಿ ಮೊಟ್ಟೆ ಇಡುವ ವಿಚಿತ್ರ ಕೋಳಿ!
ಕೋಳಿ ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ.
ಅದಕ್ಕಾಗಿಯೇ ತಜ್ಞರು ದಿನಕ್ಕೊಂದು ಮೊಟ್ಟೆ ತಿಂದು ಗಟ್ಟಿಯಾಗಿ ಎನ್ನುತ್ತಾರೆ. ಕೋಳಿ ಮೊಟ್ಟೆ ಹಳದಿ ಭಂಡಾರ ಮತ್ತು ಬಿಳಿ ಲೋಳೆ ಎಂಬ ಎರಡು ಭಾಗಗಳನ್ನು ಹೊಂದಿರುತ್ತದೆ. ಇಲ್ಲಿ ನಾವು ಹೇಳ ಹೊರಟಿರುವುದು ಒಂದು ವಿಚಿತ್ರ ಕೋಳಿಯ ಬಗ್ಗೆ, ಈ ಕೋಳಿ ಇಡುವ ಮೊಟ್ಟೆಯಲ್ಲಿ ಕೇವಲ ಬಿಳಿ ಭಾಗ ಮಾತ್ರ ಇರುತ್ತದೆ. ಹಳದಿ ಭಾಗ ಇರುವುದಿಲ್ಲ.
ಹೌದು, ಕೇರಳದ ಮಲಪ್ಪುರಂನಲ್ಲಿ ಒಂದು ವಿಚಿತ್ರ ಕೋಳಿ ಇದೆ. ಇದನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾ ರೆ. ಏಕೆಂದರೆ ಇದು ಚಿಕ್ಕ-ಚಿಕ್ಕ ಮೊಟ್ಟೆಗಳನ್ನು ಇಡುತ್ತಿದೆ. ಆ ಮೊಟ್ಟೆಗಳಲ್ಲಿ ಬಿಳಿ ಭಾಗ ಮಾತ್ರ ಇದೆ. ಹಳದಿ ಭಾಗ ಇಲ್ಲ. ಸಮದ್ ಮಲಪ್ಪುರಂನ ಪ್ರದೇಶದವರಾಗಿದ್ದು, ತಮ್ಮ ಮನೆಯಲ್ಲಿ ಕೋಳಿಗಳನ್ನು ಸಾಕುತ್ತಿದ್ದಾರೆ. ಅವುಗಳಲ್ಲಿ ಒಂದು ಕೋಳಿಯು ದ್ರಾಕ್ಷಿಹಣ್ಣಿನ ಗಾತ್ರದ ಮೊಟ್ಟೆಗಳನ್ನು ಇಡುತ್ತಿದೆ. ಈ ಐದು ವರ್ಷ ಪ್ರಾಯದ ಹಿರಿಯ ಕೋಳಿಯ ಚಿಕ್ಕ ಮೊಟ್ಟೆಯ ಕಥೆ ಈಗ ಸೋಜಿಗಕ್ಕೆ ಕಾರಣವಾಗಿದೆ.
ಕಳೆದ ಕೆಲ ದಿನಗಳಿಂದ ದ್ರಾಕ್ಷಿ ಗಾತ್ರದ ಮೊಟ್ಟೆ ಇಡುತ್ತಿರುವುದರಿಂದ ಗ್ರಾಮಸ್ಥರು ಹಾಗೂ ಸಮದ್ ಬೆರಗಾಗಿದ್ದಾರೆ, ಅಲ್ಲದೇ ಈ ಮೊಟ್ಟೆಗಳಲ್ಲಿ ಕೇವಲ ಬಿಳಿ ಭಾಗ ಮಾತ್ರ ಇದೆ. ಹಳದಿ ಭಾಗ ಇಲ್ಲ. ಕೆಲವು ದಿನಗಳ ಹಿಂದೆ ಸಾಮಾನ್ಯ ಗಾತ್ರದ ಮೊಟ್ಟೆಗಳನ್ನೂ ಇಟ್ಟಿತ್ತು ಈ ಕೋಳಿ, ಆದರೆ ಇತ್ತೀಚೆಗೆ ಸಣ್ಣ ಗಾತ್ರದ ಮೊಟ್ಟೆಗಳನ್ನು ಉದುರಿಸುತ್ತಿದೆ ಎಂದು ಕೋಳಿಯ ಓನರ್ ಸಮದ್ ಹೇಳಿದರು.
ಈ ದೊಡ್ಡ ಕೋಳಿಯ ಚಿಕ್ಕ ಮೊಟ್ಟೆಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸುತ್ತಮುತ್ತಲಿನ ಜನ ಅವರ ಮನೆಗೆ ಕೋಳಿ ಮತ್ತು ಮೊಟ್ಟೆ ನೋಡಲು ಬರುತ್ತಿದ್ದಾರೆ.
Wow, superb blog structure! How long have you ever been running a blog for?
you made running a blog look easy. The overall look of your website is magnificent,
as smartly as the content! You can see similar here e-commerce