ಜ.11ರಂದು ಕಡಬದಲ್ಲಿ ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ
ಕಡಬ: ಕಡಬ ಗ್ರಾಮ ಪಂಚಾಯಿತಿ ಕಡಬ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ವರ್ಷಗಳೇ ಸಂದರೂ ಪಂಚಾಯಿತಿ ಅಧಿಕಾರಿಗಳು ನಾಗರೀಕರಿಗೆ ಮೂಲಭೂತ ವ್ಯವಸ್ಥೆ ಒದಗಿಸಿದಿರುವ ಬಗ್ಗೆ ನಾಗರೀಕ ಹೋರಾಟ ಸಮಿತಿಯಿಂದ ಪ್ರತಿಭಟನೆ ಜನವರಿ11ರಂದು ಕಡಬದಲ್ಲಿ ನಡೆಯಲಿದೆ ಎಂದು ನಾಗರೀಕ ಹೋರಾಟ ಸಮಿತಿ ಸಂಚಾಲಕ ಸಯ್ಯದ್ ಮೀರಾ ಸಾಹೇಬ್ ಹೇಳಿದರು.
ಕಡಬದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು , ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆಯಿಲ್ಲದೆ ಅಧಿಕಾರಿಗಳೆ ಮುನ್ನಡೆಸುತ್ತಿದ್ದು, ಇದೀಗ ಅಧಿಕಾರಿಗಳು ಮನೆ ತೆರಿಗೆಯನ್ನು, ಅಂಗಡಿ ವ್ಯಾಪಾರ ಲೈಸನ್ಸ್ ಹೆಚ್ಚಿನ ದರವನ್ನು ಏಕಾಏಕಿ ಕಾನೂನು ಬಾಹಿರವಾಗಿ ಏರಿಸಿದ್ದಾರೆ. ಆದರೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ.
ಕಡಬ ಪೇಟೆಯಲ್ಲಿನ ಶೌಚಾಲಯದ ದುರಸ್ತಿ, ಸುಸಜ್ಜಿತ ರಿಕ್ಷಾ ನಿಲ್ದಾಣ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಮೂಲಭೂತ ಸೌಕರ್ಯಗಳು ನಾಗರೀಕರಿಗೆ ಅಗತ್ಯವಾಗಿದೆ. ತಕ್ಷಣ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಲಾಗುವುದು.
ಆರಂಭದಲ್ಲಿ ಕಡಬ ಮೇಲಿನ ಪೇಟೆಯಿಂದ ಮೆರವಣಿಗೆಯಲ್ಲಿ ತೆರಳಿ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟಿಸಲಾಗುವುದು ಬಳಿಕ ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಾಗರೀಕ ಹೋರಾಟ ಸಮಿತಿ ಪದಾಧಿಕಾರಿಗಳಾದ ಹಾಜಿ ಕೆ ಎಂ ಹನೀಫ್, ಚಂದರಶೇಖರ ಕರ್ಕೆರ ಪೆಲತ್ತೋಡಿ, ಚಂದ್ರಶೇಖರ ಕೋಡಿಬೈಲು, ಶಿವರಾಮ ಗೌಡ ಕಲ್ಕಾಳ , ತೋಮ್ಸನ್ ಕೆ ಟಿ ಮೊದಲಾದವರು ಇದ್ದರು.