ಸಿಮ್ ಕಾರ್ಡ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆಯಿಂದ ಮಹತ್ವದ ಆದೇಶ|ಈ ರೀತಿಯ ಸಿಮ್ ಕಾರ್ಡ್ ಬಳಕೆಯಲ್ಲಿದ್ದರೆ ಇಂದೇ ಬ್ಲಾಕ್
ಹೆಚ್ಚಿನ ಉಪಯೋಗಕ್ಕಾಗಿ ಎರಡು ಸಿಮ್ ಕಾರ್ಡ್ ಉಪಯೋಗಿಸುವುದು ಸಾಮಾನ್ಯ. ಅದರಲ್ಲೂ ಈಗಿನ ಮೊಬೈಲ್ ಗಳಲ್ಲಿ ಎರಡು ಸಿಮ್ ಬಳಸುವ ಆಯ್ಕೆ ಇರುವುದರಿಂದ ಎಲ್ಲರೂ ಉಪಯೋಗಿಸುತ್ತಾರೆ.ಆದರೆ ಕೆಲವು ಉದ್ಯಮಿಗಳು,ಸಾಮಾನ್ಯ ಜನರು 2ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸುತ್ತಾರೆ.ಇದೀಗ ಇಂತವರಿಗೆ ದೂರಸಂಪರ್ಕ ಇಲಾಖೆ (ಡಿಒಟಿ) ಆದೇಶವೊಂದನ್ನು ಹೊರಡಿಸಿದೆ.
ಭಾರತದಾದ್ಯಂತ 9 ಸಂಪರ್ಕಗಳನ್ನು ಮೀರಿದ ಮತ್ತು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂನಲ್ಲಿ ಆರು ಸಂಪರ್ಕಗಳನ್ನು ಹೊಂದಿರುವ ಚಂದಾದಾರರ ಸಿಮ್ ಅನ್ನು ಪರಿಶೀಲಿಸಲು ದೂರ ಸಂಪರ್ಕ ಇಲಾಖೆ ತಿಳಿಸಿದೆ.ಸಿಮ್ ಕಾರ್ಡ್ ಬಳಕೆಯಿಂದಾಗಿದೆ ಹಣಕಾಸು ಅಪರಾಧಗಳು, ಸ್ವಯಂಚಾಲಿತಕರೆಗಳು, ಮೋಸದ ಚಟುವಟಿಕೆಗಳು ನಡೆಯುತ್ತಿದ್ದು, ಇದನ್ನು ತಡೆಯುವಲ್ಲಿ ಟೆಲಿಕಾಂ ಇಖಾಲೆ ಈ ಮಹತ್ತರ ಕಾರ್ಯಕ್ಕೆ ಮುಂದಾಗಿದೆ.
ಡಿಸೆಂಬರ್ 7ರಿಂದ ಈ ಆದೇಶ ಹೊರಡಿಸಿದ್ದು, ಆದೇಶದ ಪ್ರಕಾರ ಆಯ್ಕೆಯ ಸಿಮ್ ಕಾರ್ಡ್ ಅನ್ನು ಉಳಿಸುವ ಮತ್ತು ಉಳಿದ ಸಿಮ್ ಕಾರ್ಡ್ ನಿಷ್ಕ್ರೀಯ ಗೊಳಿಸುವ ಆಯ್ಕೆಯನ್ನು ನೀಡಿದೆ. ಆದರೀಗ ಜನವರಿ 6 ಕೊನೆಯ ದಿನಾಂಕವೆಂದು ನಿಗದಿಪಡಿಸಿದ್ದು, ಅದರ ಒಳಗೆ ಸಿಮ್ ಕಾರ್ಡ್ ಪರಿಶೀಲಿಸಬೇಕು ಎಂದು ಹೇಳಿದೆ.
ಟೆಲಿಕಾಂ ಇಲಾಖೆಯ ಆದೇಶದ ಪ್ರಕಾರ ಗ್ರಾಹಕರು ಅನುಮತಿಗಿಂತ ಹೆಚ್ಚಿನ ಸಿಮ್ ಕಾರ್ಡ್ಗಳನ್ನು ಹೊಂದುವಂತಿಲ್ಲ. ಒಂದು ವೇಳೆ ಹೆಚ್ಚಿನ ಸಿಮ್ ಕಾರ್ಡ್ ಇದ್ದರೆ ಅದರಲ್ಲಿ ಆಯ್ಕೆಯ ಸಿಮ್ ಕಾರ್ಡ್ ಅನ್ನು ಇಟ್ಟುಕೊಂಡು ಉಳಿದ ಸಿಮ್ ಕಾರ್ಡ್ ಮತ್ತು ಬ್ಯಾಲೆನ್ಸ್ ಆಫ್ ಮಾಡಲು ಆಯ್ಕೆ ನೀಡಲಾಗುತ್ತದೆ.ಬಳಕೆಯಲ್ಲಿ ಇಲ್ಲದ ಸಿಮ್ ಕಾರ್ಡ್ ಅನ್ನು ಅಥವಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್ ನಿಂದ ತೆಗೆದುಹಾಕಲು ಟೆಲಿಕಾಂ ಆಪರೇಟರ್ ಗಳು ಡಿಒಟಿಗೆ ತಿಳಿಸಿದೆ.