ಸುಳ್ಯ : ನೂರು ದಿನಗಳ ಓದುವ ಆಂದೋಲನಕ್ಕೆ ಚಾಲನೆ

Share the Article

ಸುಳ್ಯ : ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ 100 ದಿನಗಳ ಓದುವ ಆಂದೋಲನ ಕಾರ್ಯಕ್ರಮ ಆರಂಭವಾಗಿದ್ದು, ಸ.ಮಾ.ಹಿ.ಪ್ರಾ.ಶಾಲೆ ಸುಳ್ಯ ಇಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಇವರು ಕಥೆ ಹೇಳುವ ಮೂಲಕ ಉದ್ಘಾಟಿಸಿದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ ಕುದ್ಪಾಜೆ ಇವರು ಮಕ್ಕಳಿಗೆ ವಾಚನಾಲಯ ಪುಸ್ತಕಗಳನ್ನು ವಿತರಿಸಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶೀತಲ್ ಯು ಕೆ, ಮುಖ್ಯ ಶಿಕ್ಷಕಿ ಸೀತಾ, ಶಿಕ್ಷಣ ಸಂಯೋಜಕ ವಸಂತ್ ಎಂ, ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್ ವಿ ಹಾಗೂ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave A Reply