ಪುತ್ತೂರು ತಾಲೂಕಿನ ಗಡಿಭಾಗ ಸಹಿತ ಪುಣಚ ಗ್ರಾಮದ ಹಲವೆಡೆ ಚಿರತೆ ಪ್ರತ್ಯಕ್ಷ

ಪುತ್ತೂರು ತಾಲೂಕಿನ ಗಡಿಭಾಗ ಸಹಿತ ಪುಣಚ ಗ್ರಾಮದ ಹಲವೆಡೆ ಚಿರತೆ ಪ್ರತ್ಯಕ್ಷವಾಗಿದ್ದ ಬಗ್ಗೆ ವರದಿಯಾಗಿದ್ದು, ಈ ಭಾಗದ ಜನರಲ್ಲಿ ಭಯಾತಂಕಕ್ಕೆ ಕಾರಣವಾಗಿದೆ.

 

ಪುಣಚ ಗ್ರಾಮ ಮತ್ತು ಪುತ್ತೂರು ತಾಲೂಕಿನ ಗಡಿಭಾಗದಲ್ಲಿರುವ ಚನಿಲ, ಅಂಬಟೆಮೂಲೆ, ಬೈಲುಪದವು, ಕೋಡಂದೂರು ಭಾಗದಲ್ಲಿ ಚಿರತೆ ಕಾಣಸಿಕ್ಕಿದೆ ಎನ್ನುತ್ತಾರೆ ಸಾರ್ವಜನಿಕರು.

ಅರಣ್ಯ ಇಲಾಖೆಯ ಗೇರು ಅಭಿವೃದ್ಧಿ ನಿಗಮದ ಗೇರು ನೆಡುತೋಪು ಸುಮಾರು ಮೂವತ್ತು ಎಕರೆಗಿಂತಲೂ ಅಧಿಕ ವಿಸ್ತೀರ್ಣದಲ್ಲಿ ಹರಡಿದ್ದು ಈ ಭಾಗದಲ್ಲಿ ಚಿರತೆ ಅವಿತಿರುವ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಚಿರತೆ ಜ.1 ರಂದು ಹಗಲು ವೇಳೆ ಕೋಡಂದೂರು ಭಾಗದಲ್ಲಿ ಸೀತಾರಾಮ ನಾಯಕ್ ಎಂಬವರಿಗೆ ಕಾಣಸಿಕ್ಕಿತ್ತು. ಜ.2 ರಂದು ರಾತ್ರಿ ಸುಮಾರು 10 ಗಂಟೆ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ನವೀನ್ ರೈ ಎಂಬವರಿಗೆ ಸ್ಥಳೀಯವಾಗಿ ಕಾಣ ಸಿಕ್ಕಿದೆ.

ಪ್ರತಿ ದಿನ ಒಂದಲ್ಲ ಒಂದು ಭಾಗದಲ್ಲಿ ಈ ಚಿರತೆ ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ಕಾಣಸಿಗುತ್ತಿದ್ದು, ಇದು ಈ ಭಾಗದ ಜನರ ಭಯಾತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.

Leave A Reply

Your email address will not be published.