ಅಮಾವಾಸ್ಯೆ ರಾತ್ರಿ ವಾಮಾಚಾರ ನಡೆಸಿದರೆ ಬಯಸಿದೆಲ್ಲವೂ ನಮ್ಮದಾಗುತ್ತದೆ!! ಕುರುಡು ನಂಬಿಕೆಗೆ ಅಲ್ಲಿ ನಡೆದೇ ಹೋಯಿತು ಅಪ್ರಾಪ್ತನ ನರಬಲಿ!!

ಅಮಾವಾಸ್ಯೆ ದಿನ ನರಬಲಿ ಕೊಟ್ಟರೆ ಬಯಸಿದ್ದೆಲ್ಲವೂ ಸಿಗುತ್ತದೆ ಎಂಬ ಆಸೆಯಿಂದ ಹೊರಟ ಅಪ್ರಾಪ್ತ ಬಾಲಕರು ಈಗ ಕಂಬಿ ಎಣಿಸುತ್ತಿದ್ದಾರೆ.ಅವರೇನು ಜ್ಯೋತಿಷಿಗಳಲ್ಲ, ಇನ್ನೂ ಮುಖದಲ್ಲಿ ಮೀಸೆ ಬೆಳೆಯದ ಹದಿಹರೆಯದ ಬಾಲಕರು. ಆ ಬಾಲಕರು ಮಾಡಿದ ಖತರ್ನಾಖ್ ಕೆಲಸಕ್ಕೆ ಅವರ ಚಡ್ಡಿ ದೋಸ್ತ್ ಬಲಿಯಾಗಿದ್ದಾನೆ.ಮೃತ ಬಾಲಕನನ್ನು ಮಹೇಶ್ ಅಲಿಯಾಸ್ ಮನು ಎಂದು ಗುರುತಿಸಲಾಗಿದ್ದು, ಆತನ ಸ್ನೇಹಿತರೆ ಸೇರಿ ಕೊಂದಿದ್ದಾರೆ ಎನ್ನಲಾಗಿದೆ.

 

ಘಟನೆ ವಿವರ: ಬಂದಿತರಲ್ಲಿ ಒಬ್ಬ ಆರೋಪಿಯ ತಾತ ವಾಮಾಚಾರ ಮಾಡುತ್ತಿದ್ದರಂತೆ. ಇದನ್ನು ಚಿಕ್ಕಂದಿನಿಂದಲೇ ಕಂಡಿದ್ದ ಆತ ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ನೆರವೇರುತ್ತದೆ ಎಂದು ತನ್ನ ಸ್ನೇಹಿತ ಮಹೇಶ್ ನನ್ನು ಬಲಿ ಕೊಡಲು ಇತರ ಗೆಳೆಯರನ್ನು ಕೂಡಾ ಸೇರಿಸಿಕೊಂಡಿದ್ದ.

ಅದರಂತೆ ಆ ದಿನ ರಾತ್ರಿ ಗ್ರಾಮದ ಕೆರೆಯೊಂದರ ಬಳಿಗೆ ಮಹೇಶ್ ನನ್ನು ಬರಹೇಳಿ, ಆತನ ರೂಪದ ಗೊಂಬೆಯೊಂದನ್ನು ತಯಾರಿಸಿ, ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಕೋಳಿಯನ್ನು ಬಲಿ ಕೊಟ್ಟ ಬಳಿಕ ಮಹೇಶ್ ನನ್ನು ಕೆರೆಗೆ ತಳ್ಳಿದ್ದರು.

ಘಟನೆ ಬಳಿಕ ಆರೋಪಿಗಳು ಗ್ರಾಮಕ್ಕೆ ಮರಳಿದ್ದು, ಅದರಲ್ಲಿ ಒಬ್ಬಾತ ಮನು ಕೆರೆಗೆ ಬಿದ್ದಿದ್ದಾನೆ ಎಂದು ಕಥೆ ಕಟ್ಟಿದ್ದಾನೆ. ಬಳಿಕ ಗ್ರಾಮಸ್ಥರು ಸೇರಿ ಕೆರೆಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದ್ದು, ಘಟನಾ ಸ್ಥಳದಲ್ಲಿ ವಾಮಾಚಾರದ ಕುರುಹುಗಳು ಪತ್ತೆಯಾಗಿದ್ದವು.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಕೃತ್ಯ ಬೆಳಕಿಗೆ ಬಂದಿದ್ದು ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave A Reply

Your email address will not be published.