ಮುಸ್ಲಿಂ ಯುವತಿಯರ ಸ್ಕಾರ್ಫ್ ಉಡುಗೆ ವಿವಾದ | ಕೇಸರಿ ಶಲ್ಯ ಧರಿಸಿಕೊಂಡೇ ಕಾಲೇಜಿಗೆ ಹಾಜರಾದ ವಿದ್ಯಾರ್ಥಿಗಳು !!
ಚಿಕ್ಕಮಗಳೂರು :ಉಡುಪಿ ಸರಕಾರಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬಂದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹಲವು ಹಿಂದೂ ಪರ ಸಂಘಟನೆಗಳು ಇದಕ್ಕೆ ವಿರೋಧ ಸೂಚಿಸಿದ್ದರು.
ಇದೀಗ ಚಿಕ್ಕಮಗಳೂರಿನಲ್ಲಿ ,ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುತ್ತಾರೆ ಎನ್ನುವುದನ್ನು ವಿರೋಧಿಸಿ, ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆಂದು ವರದಿಯಾಗಿದೆ.
ಈ ಹಿಂದೆಯೂ ಇಲ್ಲಿ ಇಂತಹದ್ದೇ ವಿವಾದಗಳು ನಡೆದಿದ್ದು, ಈ ವೇಳೆ ಪೋಷಕರು, ಪ್ರಾಂಶುಪಾಲರು ಈ ವಿವಾದವನ್ನು ತಿಳಿಗೊಳಿಸಿದ್ದರು. ಆದರೆ, ಇದೀಗ ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುತ್ತಾರೆ ಎನ್ನುವುದಾದರೆ ನಾವು ಕೂಡ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತೇವೆಂದು ಕೇಸರಿ ಶಲ್ಯ ಧರಿಸಿ ಬಂದಿದ್ದಾರೆ.