ಮತ್ತೆ ಲಾಕ್ ಆಗುತ್ತಾ ಕರ್ನಾಟಕ : ಸುಳಿವು ನೀಡಿದ ಆರ್.ಅಶೋಕ್
ಬೆಂಗಳೂರು: ಜನ ನಿರ್ಲಕ್ಷ್ಯ ವಹಿಸಿದರೆ ಮುಂಬೈ, ದೆಹಲಿ, ಪಶ್ಚಿಮ ಬಂಗಾಳದ ರೀತಿ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಸಚಿವ ಆರ್. ಅಶೋಕ್ ಪರೋಕ್ಷವಾಗಿ ಲಾಕ್ ಡೌನ್ ಬಗ್ಗೆ ಸುಳಿವು ನೀಡಿದರು.
ಸಿಎಂ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆ ಬಗ್ಗೆ ಸಿಎಂ ಮತ್ತೊಮ್ಮೆ ಸಭೆ ಮಾಡುತ್ತಾರೆ. ಮೂರನೇ ಅಲೆ ಬರುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರನ್ನು ರೆಡ್ ಜೋನ್ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಸಿಎಂ ಮತ್ತೊಮ್ಮೆ ಸಭೆ ಕರೆದು ಕಠಿಣ ನಿಯಮಗಳ ಬಗ್ಗೆ ನಿರ್ಧಾರ ಮಾಡಬಹುದು. ತಜ್ಞರ ಸಮಿತಿ ನೀಡುವ ಸಲಹೆಗಳನ್ನು ಯಥಾವತ್ತಾಗಿ ಜಾರಿಮಾಡಲಾಗುತ್ತದೆ ಎಂದರು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ನವರು ಏನು ಮಾಡುತ್ತಾರೆನ್ನುವುದು ನಮಗೆ ಇಂಪಾರ್ಟೆಂಟ್ ಅಲ್ಲ. ನಮಗೆ ಇರುವವರು ರಾಜ್ಯದ ಆರೂವರೆ ಕೋಟಿ ಜನರ ಜೀವ ಕಾಪಾಡುವುದು. ನಮಗೆ ಯಾವುದೇ ರ್ಯಾಲಿ, ಸಭೆ ಬಗ್ಗೆ ತಲೆಯಲ್ಲಿಲ್ಲ. ಹೀಗಾಗಿ ಜನವರಿ 4 ಅಥವಾ 5 ರಂದು ಸಭೆ ಮಾಡಿ ಕೊವೀಡ್ ತಡೆಗೆ ಬಿಗಿ ಟಫ್ ರೂಲ್ಸ್ ಜಾರಿ ಮಾಡುತ್ತೇವೆ ಎಂದರು.