‘ ಕಿಕ್ಕು ಪ್ರಾಪ್ತಿರಸ್ತು ‘ ಎಂದು ಇಂದೇ ಖುದ್ದಾಗಿ ಆಕೆಯೇ ಕೈ ಎತ್ತಿ ಹಾರೈಸಿದ್ದಳು | ಕಿಕ್ಕೆರಿಸಲು ಉತ್ಸುಕ ಗಂಡಸರಿಗೆ ಇನ್ನೇನು ಬೇಕು !

Share the Article

ಬೆಂಗಳೂರು: ಇವತ್ತು ವರ್ಷದ ಅತ್ಯಂತ ಟೈಟ್ ದಿನ. ಯಾಕೆಂದರೆ….. ಜಾಸ್ತಿ ವಿವರಣೆ ಇದಕ್ಕೆ ಯಾಕೆ ಬೇಕು? ಇವತ್ತು ಆ ಬಗ್ಗೆ ಜಾಸ್ತಿ ತಿಲ್ಕೊಳ್ಳಾಕೆ ಯಾರಿಗೆ ತಾನೇ ಸಮಯ ಇದೆ ? ಬೀರು ಮತ್ತು ವಿಸ್ಕಿಯ ಮತ್ತು ಗಮ್ಮತ್ತು ಕಣ್ಣ ಮುಂದೆ ತಾಳ ಮೇಳ ತಪ್ಪಿ ಕುಣೀತಿರಬೇಕಾದರೆ, ಅಲ್ಲಿ ಅತ್ತ ಕಡೆ ಆ ಕಡೆಯಿಂದ ಬಂದ ಆಕೆ ‘ಕಿಕ್ಕು ಪ್ರಾಪ್ತಿರಸ್ತು’ ಎಂದು ಹಾರೈಸಿದರೆ ಹೇಗಿರಬಹುದು? ಯಾರಿಗುಂಟು ಯಾರಿಗಿಲ್ಲ ?!

ಹಾಗೆ ಆಕೆ ಆತನಿಗೆ ‘ಕಿಕ್ಕು ಪ್ರಾಪ್ತಿರಸ್ತು’ ಎಂದು ಹಾರೈಸಿದ್ದೀಗ ಬಹಿರಂಗವಾಗಿದೆ. ಇಂದೇ ‘ಕಿಕ್ಕು ಪ್ರಾಪ್ತಿರಸ್ತು’ ಎಂಬ ಸಿನಿಮಾದ ಫಸ್ಟ್‌ಲುಕ್ ಬಿಡುಗಡೆ ಆಗಿದೆ. ಇವತ್ತು ಅದು ಬಿಡುಗಡೆಗೊಂಡಿದ್ದು ಕಾಕತಾಳಿಯ ಅಂತೂ ಅಲ್ಲವೇ ಅಲ್ಲ. ಇದು ಪೂರ್ವನಿಯೋಜಿತ ಎನ್ನುವುದೇ ಸರಿ. ಇವತ್ತು, ಅಂದರೆ ಡಿಸೆಂಬರ್ 31ರ ಟೈಟೆಸ್ಟ್ ಡೇ ಆಫ್ ದ ಈಯರ್ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ಮೊದಲೇ ನಿರ್ಧರಿಸಿತ್ತು. ಹಾಗಾಗಿ ಆರ್‌ಕೆ ಕ್ರಿಯೇಷನ್ಸ್ ಬ್ಯಾನರ್‌ನಡಿ ಕೆ.ಆರ್.ಪುರದ ಶ್ರೀನಿ ಹಾಗೂ ಸುಬ್ಬಣ್ಣ ಎಂಬವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಇಂದೇ ಕಿಕ್ ಆನ್ ಆಗಿದೆ.

ನಿರ್ದೇಶಕ ಸುನಿಲ್ ಸನ್ನಿ, ಹರ್ಷಿತ್, ಶಿಲ್ಪ, ಶಿವ, ನವೀನ್ ಅವರ ಅಭಿನಯದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಇಂದು ಇದರ ಫಸ್ಟ್‌ಲುಕ್ ಬಿಡುಗಡೆ ಆಗಿದೆ. ಪೋಸ್ಟರ್ ಡಿಸೈನ್, ಸಿನಿಮಾದ ಶೀರ್ಷಿಕೆ ಹಾಗೂ ಬಿಡುಗಡೆ ಮಾಡಿದ ದಿನ ಎಲ್ಲವೂ ಒಂದಕ್ಕೊಂದು ಪೂರಕವಾಗಿರುವುದು ಚಿತ್ರದ ಕುರಿತು ಕುತೂಹಲ ಮೂಡಿಸಿದೆ.

Leave A Reply

Your email address will not be published.