ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ
ದೇವಸ್ಥಾನ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಬೇಕು-ಶೋಭಾ ಕರಂದ್ಲಾಜೆ
ಸವಣೂರು: ಗ್ರಾಮದ ದೇವಸ್ಥಾನ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.
ಕೇವಲ ದೇವಸ್ಥಾನ ಕಟ್ಟಿದರೆ ಸಾಲದು ಅದರ ಪಾವಿತ್ರೃತೆ ಕಾಪಾಡುವ ಕೆಲಸವೂ ನಮ್ಮಿಂದಾಗಬೇಕು.ನಿರ್ಮಾಣದ ವೇಳೆ ಕರಸೇವೆ ನಡೆದಂತೆ ನಿರಂತರ ಸ್ವಚ್ಛತೆಯ ಕರಸೇವೆ ನಡೆಯಬೇಕು. ಈ ಮೂಲಕ ದೇವಳದೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು ಎಂದರು.
ಊರಿನ ದೇವಸ್ಥಾನ, ಆಸ್ಪತ್ರೆ, ಶಾಲೆಯ ಅಭಿವೃದ್ಧಿ ಆ ಗ್ರಾಮದ ನಾಯಕತ್ವ, ಚಟುವಟಿಕೆನ್ನು ಸಾರಿ ಹೇಳುತ್ತದೆ. ಸರ್ವೆ ದೇವಸ್ಥಾನ ನಿರ್ಮಾಣ ಒಂದು ಇತಿಹಾಸ ನಿರ್ಮಿಸಿದೆ ಎಂದ ಅವರು ದೇವಳದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ನೆರವು ನೀಡುವುದಾಗಿ ಭರವಸೆ ನೀಡಿದರು.
ದೇವಳ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ವಿಶೇಷ ಪೂಜೆ ಸಲ್ಲಿಸಿದರು
.
ಶೋಭಾ ಕರಂದ್ಲಾಜೆ ತಾಯಿ ಪೂವಕ್ಕ ಕರಂದ್ಲಾಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಎನ್ ಎಸ್ ಡಿ ಸರ್ವೆ ದೋಳಗುತ್ತು, ಪ್ರಧಾನ ಅರ್ಚಕ ಶ್ರೀ ರಾಮ ಕಲ್ಲೂರಾಯ, ಪ್ರಮುಖರಾದ ವಿಜಯ ಕುಮಾರ್ ರೈ, ರಾಧಾಕೃಷ್ಣ ರೈ, ಬೆಳಿಯಪ್ಪ ಗೌಡ, ವಿಶ್ವನಾಥ ರೈ ಮತ್ತಿತರರು ಉಪಸ್ಥಿತರಿದ್ದರು.