ಮಂಗಳೂರು: ಹಲವು ಸಮಯಗಳಿಂದ ಹಿಂದೂಗಳ ಪವಿತ್ರ ಸ್ಥಾನಗಳ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆಯುತ್ತಿದವ ಅಂದರ್!! ಯೇಸು ಕ್ರಿಸ್ತನೊಬ್ಬನೇ ದೇವರು ಎಂದವನಿಗೆ ಕಾಣದೆ ಹೋಯಿತು ಹಿಂದೂ ದೈವ ದೇವರುಗಳ ಮಹಿಮೆ

Share the Article

ಮಂಗಳೂರು:ಕಳೆದ ಕೆಲ ಸಮಯಗಳಿಂದ ಮಂಗಳೂರು ನಗರದ ಹಲವಾರು ಕಡೆಯ ಹಿಂದೂಗಳ ದೈವ, ದೇವಸ್ಥಾನದ ಕಾಣಿಕೆ ಹುಂಡಿಗೆ ಅವಹೇಳನಕಾರಿಯಾದ ಬರಹದ ಪತ್ರ, ಜೊತೆಗೆ ಬಳಸಿದ ಕಾಂಡೋಮ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿ ಟಿವಿ ಫುಟೆಜ್ ಆಧಾರದಲ್ಲಿ ಆರೋಪಿಯೊಬ್ಬನನ್ನು ವಿಚಾರಣೆಗೊಳಪಡಿಸಿದಾಗ ಎಲ್ಲಾ ವಿಚಾರಗಳು ಬಯಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಗುಜಿರಿ ವ್ಯಾಪಾರಿ ದೇವದಾಸ್ ದೇಸಾಯಿ(62) ಎಂದು ಗುರುತಿಸಲಾಗಿದೆ. ಮೂಲತಃ ಹುಬ್ಬಳ್ಳಿಯ ಉಣ್ಣಲ್ ನಿವಾಸಿಯಾದ ಈತ ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದ. ಮದುವೆಯಾಗಿ ಒಂದು ಹೆಣ್ಣು ಮಗು ಹಾಗೂ ಸಂಸಾರ ಇದ್ದ ಈತನನ್ನು ಮದುವೆಯಾಗಿ ಮೂರು ವರ್ಷದಲ್ಲಿ ಹೆಂಡತಿ ಬಿಟ್ಟು ಹೋಗಿದ್ದು, ಆ ಬಳಿಕ ಏಕಾಂಗಿಯಾಯಿಯೇ ನೆಲೆ ಕಂಡುಕೊಂಡಿದ್ದ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.

ವಿಡಿಯೋ ತುಣುಕು

ಒಟ್ಟು ಈತನ ಕೈಯಿಂದ ಅಪಚಾರಕ್ಕೊಳಗಾದ ದೈವ -ದೇವಸ್ಥಾನಗಳ ಪಟ್ಟಿ ಇಲ್ಲಿದೆ.

  1. ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟಿ
  2. ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ
  3. ಕೊಂಡಾಣ ದೈವಸ್ಥಾನ
  4. ಮಂಗಳಾದೇವಿ ದೇವಸ್ಥಾನ
  5. ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ನ ಬಳಿ ಕಾಣಿಕೆ ಡಬ್ಬಿ
  6. ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್ ಬಳಿ
  7. ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ
  8. ಕಲ್ಲಾಪು ನಾಗನ ಕಟ್ಟಿ
  9. ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ
  10. ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ
  11. ಕುತ್ತಾರು ಕೊರಗಜ್ಜನ ಕಟ್ಟಿ
  12. ಕುಡುಪು ದೈವಸ್ಥಾನ
  13. ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ
  14. ನಂದಿಗುಡ್ಡೆಯ ಕೊರಗಜ್ಜನ ಗುಡಿ
  15. ಎ ಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ
  16. ಸಿಖ್ ಗುರುದ್ವಾರ ಗುಡಿ- ಬಂಗ್ರಕೂಳೂರು
  17. ಕೋಟ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ- ಮಂಕಿ ಸ್ಟಾಂಡ್
  18. 18. ಆದಿ ಮಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ ಜೆಪ್ಪು ಮಹಾಕಾಳಿ ಪಡು.

ಒಟ್ಟಿನಲ್ಲಿ ಕ್ರೈಸ್ತ ಸಮುದಾಯದ ಬಗ್ಗೆ ಅಪಾರ ನಂಬಿಕೆ ಗೌರವ ಇಟ್ಟುಕೊಂಡಿರುವ ಈತ ಹಿಂದೂ ಪವಿತ್ರ ಸ್ಥಳಗಳ ಮೇಲೆ ಈ ರೀತಿ ಅನ್ಯಾಯ ಎಸಗಿರುವುದರ ಹಿಂದೆ ಹಲವು ಅನುಮಾನಗಳಿವೆ.

Leave A Reply