ತಲಕಾವೇರಿಯಲ್ಲಿ ಕ್ಯಾಮೆರಾಗಳಿಗೆ ಅಡ್ಡ ಬೀಳುವ ಭರದಲ್ಲಿ ಬ್ರಹ್ಮಕುಂಡಿಕೆಗೆ ಕುಂಡೆ ತಿರುಗಿಸಿ ಬಗ್ಗಿದ ಡಿಕೆಶಿ | ಸಮರ್ಥಿಸಿಕೊಂಡ ಟಿ.ಎಂ.ಶಹೀದ್ : ಹಿಂದೂ ಆಚಾರದ ವಿಷಯದಲ್ಲಿ ಅನ್ಯ ಧರ್ಮೀಯರು ತಲೆ ತೂರಿಸಿದ್ದಕ್ಕೆ ಬಿಜೆಪಿ ಗರಂ !

ತಲಕಾವೇರಿ ತೀರ್ಥ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬ್ರಹ್ಮಕುಂಡಿಕೆಗೆ ಕುಂಡೆ ತಿರುಗಿಸಿ ಬಗ್ಗಿ ಕ್ಯಾಮೆರಾಗಳಿಗೆ ನಮಸ್ಕರಿಸಿರುವುದಕ್ಕೆ ಇದೀಗ  ಮಡಿಕೇರಿಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಡಿ.ಕೆ.ಶಿವಕುಮಾರ್ ಅವರು ಸೂತಕದ ಕಾರಣದಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಕ್ಯಾಮೆರಾ ಕಂಡೊಡನೆ ಮಾತೆ ಕಾವೇರಿಯ ಉಗಮ ಸ್ಥಾನವಾದ ಬ್ರಹ್ಮ ಕುಂಡಿಕೆಯನ್ನೂ ಮರೆತು ಪ್ರಚಾರಕ್ಕಾಗಿ ಕುಂಡಿಕೆಗೆ ಬೆನ್ನು ಹಾಕಿ ಕ್ಯಾಮೆರಾಕ್ಕೆ ಅಡ್ಡ ಬಿದ್ದಿರುವುದರ ಬಗ್ಗೆ ಆಕ್ರೋಶ ಎದ್ದಿದೆ. ಈ ಕಾಂಗ್ರೆಸ್’ನ ಸ್ಥಳೀಯ ನಾಯಕರು ಸಮಜಾಯಿಷಿ ಕೊಡಲಿ ಎಂದು ಸ್ತಳೀಯ ಬಿಜೆಪಿ ನಾಯಕ ಮಹೇಶ್ ಜೈನಿ ಸವಾಲು ಹಾಕಿದ್ದಾರೆ.

ಡಿ.ಕೆ. ಶಿವ ಕುಮಾರ್ ಅವರ ತಪ್ಪನ್ನು ಸಮರ್ಥಿಸಿಕೊಳ್ಳಲು ಅಲ್ಲಿ ಯಾರೇ ಜಿಲ್ಲಾ ಕಾಂಗ್ರೆಸ್ಸಿಗರು ರೆಡಿ ಇರಲಿಲ್ಲ. ಹಾಗಾಗಿ ಒಬ್ಬ ಅಲ್ಪಸಂಖ್ಯಾತ, ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಅಲ್ಪಸಂಖ್ಯಾತ ನಾಯಕ, ಸುಳ್ಯದ ಟಿ.ಎಂ.ಶಹೀದ್ ಅವರ ಕೈಲಿ ಸಮರ್ಥಿಸಿಕೊಂಡಿರುವುದು ಖಂಡನೀಯ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಟೀಕಿಸಿದ್ದಾರೆ.

ಮುಸ್ಲಿಂ ನಾಯಕನ ಬಾಯಿಯಿಂದ ತಲ ಕಾವೇರಿ ಕ್ಷೇತ್ರದ ಬಗ್ಗೆ ಹೇಳಿಕೆ ಕೊಡಿಸಿರುವುದು ಕೊಡಗು ಕಾಂಗ್ರೆಸ್’ನ ಸ್ಥಳೀಯ ನಾಯಕರ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಜೈನಿ ಅವರು ವ್ಯಂಗವಾಡಿದ್ದಾರೆ.

ಈ ಸಮಯ ಸಾಧಕ ನಾಯಕರ ಈ ವರ್ತನೆ ಕೊಡಗಿಗೆ ಮಾಡಿದ ಅವಮಾನ, ಮಾತ್ರವಲ್ಲದೆ ನಮ್ಮ ಧಾರ್ಮಿಕ ಆಚಾರ-ವಿಚಾರದಲ್ಲಿ ಒಬ್ಬ ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕ ಮೂಗು ತೂರಿಸಿರುವುದಕ್ಕೆ ಸ್ಥಳೀಯ ಲಜ್ಜೆಗೆಟ್ಟ ಕಾಂಗ್ರೆಸ್ಸಿಗರೇ ಕಾರಣ ಎಂದು ಮಹೇಶ್ ಜೈನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.