ಹೊಸದಾಗಿ ಖರೀದಿಸಿದ ಮೊಬೈಲ್ ಫೋನನ್ನು ಮದುವೆ ದಿಬ್ಬಣದ ರೀತಿ ಮೆರವಣಿಗೆಯಲ್ಲಿ ಮನೆಗೆ ತಂದ ಚಹಾ ವ್ಯಾಪಾರಿ|ಅಷ್ಟಕ್ಕೂ ಆತನ ಈ ಸಂಭ್ರಮಕ್ಕೆ ಕಾರಣ ಏನು ಗೊತ್ತೇ?
ಸಾಮನ್ಯವಾಗಿ ಜನ-ಜಂಗುಳಿ, ಮೆರವಣಿಗೆ, ಡಿಜೆ ಮುಂತಾದ ಮನೋರಂಜನೆಗಳು ಇರುವುದು ಮದುವೆಯಲ್ಲೋ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ನೋಡಿರುತ್ತೇವೆ. ಆದ್ರೆ ಇಲ್ಲೊಂದು ಕಡೆ ಮದುವೆ ರೀತಿಲಿ ಮೆರವಣಿಗೆಲಿ ಬಂದಿದ್ದಾದರೂ ಏನು ಗೊತ್ತೇ..?
ಹೌದು. ಇಲ್ಲೊಬ್ಬನ ಈ ಸಂಭ್ರಮ ಯಾವುದಕ್ಕೆ ಎಂದು ಗೊತ್ತಾದರೆ ನಗುವುದಂತೂ ಖಚಿತ.ಆದ್ರೆ ನಗೋದಕ್ಕೂ ಅರ್ಥ ಬೇಕಲ್ಲ. ಒಂದು ಕಡೆಯಿಂದ ಯೋಚಿಸಿದರೆ ಈತನ ಅವತಾರ ನಗುವಂತಿದೆ. ಇನ್ನೊಂದು ಕಡೆಯಿಂದ ಯೋಚಿಸಿದರೆ,ಸಂಭ್ರಮಿಸೋದಕ್ಕೆ ಯಾವುದಾದರೇನು ಸಣ್ಣ-ಪುಟ್ಟ ವಿಷಯವನ್ನೂ ಹೃದಯ ಖುಷಿ ಎನಿಸುವಷ್ಟು ಆಚರಿಸಬೇಕು.ಇಲ್ಲಿ ಆದದ್ದು ಅದೆ.ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಚಹಾ ಮಾರಾಟಗಾರರೊಬ್ಬರು 12,500 ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಖರೀದಿಸಿರುವುದನ್ನು ಮದುವೆಯ ರೀತಿಯಲ್ಲಿ ಆಚರಿಸಿದ್ದಾನೆ.
ಈ ವ್ಯಕ್ತಿ ಮೊಬೈಲ್ ಫೋನ್ ಅನ್ನು ಅಂಗಡಿಯಲ್ಲಿ ಖರೀದಿ ಮಾಡಿ ನಂತರ ಅದನ್ನು ಹಾಗೆ ತನ್ನ ಜೇಬಿನಲ್ಲಿ ಇರಿಸಿಕೊಂಡು ಮನೆಗೆ ತರಲಿಲ್ಲ. ಬದಲಿಗೆ ಅವರು ಡ್ರಮ್ ಹೊಡೆಯುವವರನ್ನು ಕರೆಯಿಸಿ ಮತ್ತು ಡಿಜೆ ಸಂಗೀತ ನುಡಿಸುವ ಮೂಲಕ ಭವ್ಯವಾದ ಮೆರವಣಿಗೆಯ ರೀತಿಯಲ್ಲಿ ತನ್ನ ಮನೆಗೆ ಆ ಮೊಬೈಲ್ ಫೋನ್ ತೆಗೆದುಕೊಂಡು ಬಂದಿದ್ದಾರೆ.ಈ ಮೆರವಣಿಗೆಯ ಸದ್ದು ಕೇಳಿದ ಜನರು ತಮ್ಮ ಮನೆಯಿಂದ ಹೊರ ಬಂದು ನೋಡಿದವರಿಗೆ ಇದು ಒಂದು ಮದುವೆಯ ಭವ್ಯ ಮೆರವಣಿಗೆ ಎಂದು ಅನ್ನಿಸಿರಬಹುದು. ಆದರೆ ಅಲ್ಲಿ ಯಾವುದೇ ನವ ವಧು ವರ ಇರಲಿಲ್ಲ ಬದಲಿಗೆ ಮೊಬೈಲ್ ಇತ್ತು.ಈ ತಮಾಷೆಯ ಘಟನೆಯು ಶಿವಪುರಿ ಜಿಲ್ಲೆಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಚಹಾ ಮಾರುವವರಾದ ಮುರಾರಿ ಕುಶ್ವಾಹಗೆ 5 ವರ್ಷದ ಮಗಳು ಮದ್ಯ ಕುಡಿಯುವ ಅಭ್ಯಾಸ ಬಿಟ್ಟು ಹಣ ಉಳಿಸುವಂತೆ ವಿನಂತಿಸಿದ್ದಳು ಎಂದು ಹೇಳಿದರು. ಅಲ್ಲದೆ, ಆ ಉಳಿತಾಯ ಮಾಡಿದ ಹಣದಿಂದ ತನಗೆ ಒಂದು ಮೊಬೈಲ್ ಫೋನ್ ಖರೀದಿ ಮಾಡಿಕೊಡುವಂತೆಯೂ ಅವಳು ತನ್ನ ತಂದೆಗೆ ಹೇಳಿದ್ದಳು.ತಂದೆ ಮುರಾರಿ, ಮಗಳಿಗೆ ಮಾತು ಕೊಟ್ಟಂತೆ ವಿಶಿಷ್ಟ ಶೈಲಿಯಲ್ಲಿ ಒಂದು ಮೊಬೈಲ್ ಫೋನ್ ಖರೀದಿಸಿದ್ದಕ್ಕಾಗಿ ತನ್ನ ಸ್ನೇಹಿತರಿಗೂ ಪಾರ್ಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ.
ಮುರಾರಿ ಹೊಸ ಮೊಬೈಲ್ ಫೋನ್ ಖರೀದಿಸಲು ಹಣದ ಕೊರತೆ ಇದ್ದಾಗ ಫೈನಾನ್ಸ್ ಒಂದರಲ್ಲಿ ಹಣದ ಸಹಾಯ ಪಡೆದುಕೊಂಡು ಮೊಬೈಲ್ ಖರೀದಿಸಿದ್ದಾರೆ. ‘ನನ್ನ ಮಗಳ ಸಂತೋಷಕ್ಕಾಗಿ ನಾನು ಇದನ್ನೆಲ್ಲಾ ಮಾಡಿದ್ದೇನೆ’ ಎಂದು ಮುರಾರಿ ಸುದ್ದಿ ಮಾಧ್ಯಮಕ್ಕೆ ಹೇಳಿದರು.ಅಂತೂ ಮಗಳನ್ನು ಖುಷಿ ಪಡಿಸುವಲ್ಲಿ ತಂದೆ ಎತ್ತಿದ ಕೈ ಆದ..