ಮುಸ್ಲಿಂ ಹುಡುಗನನ್ನು ಯಾವುದೇ ಕಾರಣಕ್ಕೂ ಮದುವೆಯಾಗಲಾರೆ ಎಂದ ಮುಸ್ಲಿಂ ನಟಿ !! | ಅದಕ್ಕೆ ಆಕೆ ನೀಡಿದ ಕಾರಣ ಏನು ಗೊತ್ತಾ ??
ಸಿನಿಮಾ ನಟಿಯರೇ ಹಾಗೆ. ತುಂಡುಡುಗೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಕಾಯುತ್ತಿರುತ್ತಾರೆ. ಅತ್ಯಂತ ಕಡಿಮೆ ಉಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಪೋಸ್ ಕೊಟ್ಟು ಖ್ಯಾತಿ ಗಳಿಸಲು ಹವಣಿಸುವ ಕೆಲವು ತಾರೆಗಳ ಪೈಕಿ ನಟಿ ಉರ್ಫಿ ಜಾವೇದ್ ಕೂಡ ಒಬ್ಬಳು. ಈ ನಟಿ ಇದೀಗ ಬಿಸಿಬಿಸಿ ಸುದ್ದಿಯಲ್ಲಿದ್ದಾಳೆ.
ಈಗಾಗಲೇ ಈಕೆ ತೊಟ್ಟಿರುವ ಡ್ರೆಸ್‌ಗಳಿಂದ ಸಾಕಷ್ಟು ಟ್ರೋಲ್ ಆಗಿದ್ದಾಳೆ. ಆದರೆ ಯಾವುದಕ್ಕೂ ಕೇರ್ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವ ಈಕೆಯದ್ದು ಎತ್ತಿದ ಕೈ. ಬಿಗ್ ಬಾಸ್ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಾಕೆ ಈ ಉರ್ಫಿ ಜಾವೇದ್. ಇಸ್ಲಾಂ ಧರ್ಮಕ್ಕೆ ಸೇರಿರುವ ಉರ್ಫಿ ಇದೀಗ ಮದುವೆಗೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ನೀಡಿದ್ದು, ಮುಸ್ಲಿಮರಲ್ಲಿ ಕಿಚ್ಚು ಹಚ್ಚಿದೆ. ನಟಿಯ ವಿರುದ್ಧ ಮುಸ್ಲಿಂ ಸಮುದಾಯದಲ್ಲಿ ಭಾರಿ ಆಕ್ರೋಶವೂ ವ್ಯಕ್ತವಾಗಿದೆ.
ಅಷ್ಟಕ್ಕೂ ಈಕೆ ಹೇಳಿದ್ದೇನೆಂದರೆ, ನಾನು ಮುಸ್ಲಿಮಳೇ ಆಗಿದ್ದರೂ ಯಾವುದೇ ಕಾರಣಕ್ಕೂ ಇಸ್ಲಾಂ ಧರ್ಮಿಯ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು. ಅದಕ್ಕೆ ಈ ಬೆಡಗಿ ಕೊಟ್ಟ ಕಾರಣ ಏನೆಂದರೆ, ‘ನಾನು ಮುಸ್ಲಿಂ ಹುಡುಗಿ. ಆದರೆ ನಮ್ಮ ಧರ್ಮದಲ್ಲಿನ ಪುರುಷರ ಮನಸ್ಥಿತಿ ಹೇಗಿದೆ ಎಂದರೆ ಮಹಿಳೆಯರು ಅವರು ಹೇಳಿದ ರೀತಿಯೇ ನಡೆದುಕೊಳ್ಳಬೇಕು ಎನ್ನುವುದು. ಈ ಮೂಲಕ ಮುಸ್ಲಿಂ ಸಮುದಾಯದ ಎಲ್ಲ ಮಹಿಳೆಯರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅವರು ಬಯಸುತ್ತಾರೆ. ಇದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಆದ್ದರಿಂದ ಇಸ್ಲಾಂ ಧರ್ಮದ ಮೇಲೆಯೇ ನನಗೆ ನಂಬಿಕೆ ಹೊರಟುಹೋಗಿದೆ. ಇದರ ಮೇಲೆ ನನಗೆ ಸ್ವಲ್ಪವೂ ಆಸಕ್ತಿ ಉಳಿದಿಲ್ಲ. ಇನ್ನು ಮದುವೆ ವಿಷಯದ ಬಗ್ಗೆ ಹೇಳುವುದಾದರೆ ನಾನಂತೂ ಮುಸ್ಲಿಂ ಹುಡುಗನನ್ನು ಮದುವೆಯಾಗಲಾರೆ’ ಎಂದಿದ್ದಾಳೆ.
‘ನಾನೀಗ ಭಗವದ್ಗೀತೆ ಓದುತ್ತಿದ್ದೇನೆ. ಆ ಧರ್ಮದ ಬಗ್ಗೆ ನಾನು ಹೆಚ್ಚು ತಿಳಿದುಕೊಳ್ಳಲು ಬಯಸಿದ್ದೇನೆ. ಇದರಲ್ಲಿ ಇರುವ ತಾರ್ಕಿಕ ವಿಚಾರಗಳ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇದೆ. ಮೂಲಭೂತವಾದವನ್ನು ನಾನು ದ್ವೇಷಿಸುತ್ತೇನೆ. ಈ ಪವಿತ್ರ ಗ್ರಂಥದಲ್ಲಿ ಇರುವ ಒಳ್ಳೆಯ ಅಂಶಗಳನ್ನು ಪಡೆದುಕೊಳ್ಳಬೇಕು ಎಂದುಕೊಂಡಿದ್ದೇನೆ’ ಎಂದಿದ್ದಾಳೆ ಉರ್ಫಿ.
‘ನನ್ನ ಡ್ರೆಸ್ ನೋಡಿ ಮುಸ್ಲಿಂ ಜನರಿಂದಲೇ ನನಗೆ ಹೆಚ್ಚು ದ್ವೇಷದ ಕಮೆಂಟ್‌ಗಳು ಬರುತ್ತಿವೆ. ಇಸ್ಲಾಂ ಧರ್ಮದ ಇಮೇಜ್ ಹಾಳುಮಾಡುತ್ತಿದ್ದೇನೆ ಅಂತ ಅವರು ನನ್ನ ಮೇಲೆ ಆರೋಪ ಹೊರಿಸುತ್ತಾರೆ, ನಾನು ಹೇಗೆ ಬೇಕಾದರೂ ಇರುವ ಹಕ್ಕು ನನಗೆ ಇದೆ. ನನ್ನನ್ನು ಪ್ರಶ್ನಿಸಲು ಅವರ್ಯಾರು? ಇಂಥದ್ದೊಂದು ಕೆಟ್ಟ ಕಮೆಂಟ್‌ಗಳನ್ನು ಮುಸ್ಲಿಮರಿಂದ ಮಾತ್ರ ಕಾಣಲು ಸಾಧ್ಯ. ಆದ್ದರಿಂದ ನಾನು ಆ ಧರ್ಮದ ಹುಡುಗನನ್ನು ಖಂಡಿತವಾಗಿಯೂ ಮದುವೆಯಾಗಲಾರೆ’ ಎಂದಿದ್ದಾಳೆ ಉರ್ಫಿ.
‘ನಾನು ಯಾವುದೇ ಧರ್ಮವನ್ನು ನಾನು ಫಾಲೋ ಮಾಡುವುದಿಲ್ಲ. ಹಾಗಾಗಿ ನಾನು ಪ್ರೀತಿಸುವ ಹುಡುಗನ ಧರ್ಮ ನನಗೆ ಮುಖ್ಯವಾಗುವುದಿಲ್ಲ. ನಮಗೆ ಇಷ್ಟಬಂದವರ ಜೊತೆ ನಾವು ಮದುವೆ ಆಗಬೇಕು’ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ. ಇದೀಗ ಆಕೆಯ ಹೇಳಿಕೆ ಫುಲ್ ವೈರಲ್ ಆಗಿದ್ದು, ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.