ಹಾಲಿವುಡ್ ನಟನೊಬ್ಬ ಲೈಂಗಿಕ ಭಕ್ಷಕನಾದ!! ಶೂಟಿಂಗ್ ನಲ್ಲಿ ನಟಿಯರ ಖಾಸಗಿ ಅಂಗವನ್ನೇ ದಿಟ್ಟಿಸುತ್ತಿದ್ದ ಕಾಮಿ- ಮುಂದೆ ನಡೆಯಿತು ನಡೆಯಬಾರದ ಘಟನೆ

Share the Article

ಖ್ಯಾತ ಹಾಲಿವುಡ್ ನಟನೋರ್ವನ ವಿರುದ್ಧ ಖ್ಯಾತ ಗಾಯಕಿಯೊಬ್ಬರು ಲೈಂಗಿಕ ಕಿರುಕುಳದ ಗಂಭೀರ ಆರೋಪಮಾಡಿದ್ದಾರೆ. ಸೆಕ್ಸ್&ದಿ ಸಿಟಿ ಚಿತ್ರದ ನಟ 2002 ರಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಒಟ್ಟು ಈ ಪ್ರಕರಣ ಸೇರಿ ನಾಲ್ವರು ಯುವತಿಯರು ಈತನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಮಾಡಿದ್ದಾರೆ.

ಈ ಮೊದಲು ಮೂವರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿತ್ತು. ಸದ್ಯ ಖ್ಯಾತ ಗಾಯಕಿ ಲಿಸಾ ಜೆಂಟೈಲ್ ಕೂಡಾ ತಮ್ಮ ವಕೀಲಯ ಜೊತೆ ಪತ್ರಿಕಾ ಗೋಷ್ಟಿಯಲ್ಲಿ ತಮಗಾದ ಕಹಿ ಅನುಭವದ ವಿಚಾರ ಬಹಿರಂಗಪಡಿಸಿದ್ದಾರೆ.

ಬಲವಂತವಾಗಿ ಲಿಸಾ ಅವರನ್ನು ಚುಂಬಿಸಿದಲ್ಲದೇ, ಎದೆ ಮುಟ್ಟಿ ಮರಳಿ ಮುಟ್ಟಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಇಷ್ಟಕ್ಕೇ ಸುಮ್ಮನಾಗದ ಆಸಾಮಿ, ಘಟನೆಯ ಬಗ್ಗೆ ಹೊರಗೆಲ್ಲೂ ಬಾಯಿಬಿಡಬಾರದೆಂದು ತಾಕೀತು ಕೂಡಾ ಮಾಡಿದ್ದನಂತೆ.

ಈ ಮೊದಲು ಈತನಿಂದ ಅನ್ಯಾಯಕ್ಕೊಳಗಾದ ನಟಿಯೊಬ್ಬರು ಆತನೊಬ್ಬ ಲೈಂಗಿಕ ಭಕ್ಷಕ, ಶೂಟಿಂಗ್ ಸಮಯದಲ್ಲಿ ನಟಿಯರ ಖಾಸಗಿ ಅಂಗದತ್ತಲೇ ಆತನ ನೋಟ ಎಂದು ಹೇಳಿದ್ದರು. ಘಟನೆಯ ಬಗ್ಗೆ ಆತನ ವಕ್ತಾರಾರು ಪ್ರತಿಕ್ರಿಯಿಸಲು ಹಿಂಜರಿದಿದ್ದಾರೆ. ಓರ್ವ ನಟನಿಂದ ಇಂತಹ ಹಲವಾರು ಅನ್ಯಾಯ ನಡೆಯುತ್ತಿದ್ದರೂ ಎಲ್ಲರೂ ಮೌನಿಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ.

Leave A Reply