ಗೂಗಲ್ ನಲ್ಲಿ ಮಾಹಿತಿ ಹುಡುಕೋ ಮುಂಚೆ ಎಚ್ಚರ |ಅಪ್ಪಿ ತಪ್ಪಿಯೂ ಈ ವಿಷಯದ ಕುರಿತು ಸರ್ಚ್ ಮಾಡಿದ್ರೆ ಜೈಲು ಶಿಕ್ಷೆ ಖಾಯಂ

ಗೂಗಲ್ ನಲ್ಲಿ ಯಾವುದೇ ಮಾಹಿತಿ ಹುಡುಕಿದರೂ ತಕ್ಷಣಕ್ಕೆ ಲಭ್ಯವಾಗುತ್ತದೆ. ಹೀಗಾಗಿ ಬಹುತೇಕರು ಇದನ್ನು ಬಳಸಿ ತಮ್ಮ ಕೆಲಸ ಸುಲಭವಾಗಿಸುತ್ತಾರೆ. ಆದ್ರೆ ನೀವು ಗೂಗಲ್ ಸರ್ಚ್ ಮಾಡುವಾಗ ಎಚ್ಚರಿಕೆಯಿಂದ ಇರುದು ಅಷ್ಟೇ ಮುಖ್ಯ. ಯಾಕಂದ್ರೆ ಸ್ವಲ್ಪ ತಪ್ಪಿದರೂ ನೀವೂ ಜೈಲು ಸೇರೋದು ಖಂಡಿತ.

ಹೌದು. ನೀವು ಗೂಗಲ್ ನಲ್ಲಿ ಈ ಸೂಕ್ಷ್ಮ ವಿಷಯದ ಕುರಿತು ಸರ್ಚ್ ಮಾಡಿದ್ರೆ ಪಕ್ಕ ಜೈಲು ಖಾಯಂ. ಹಾಗಿದ್ರೆ ಯಾವ ವಿಷಯ ಹುಡುಕಿದ್ರೆ ಜೈಲು ಸೇರುತ್ತೀರಾ? ಇಲ್ಲಿದೆ ನೋಡಿ.

ಚಲನಚಿತ್ರ ಬಿಡುಗಡೆಗೆ ಮೊದಲು ಸೋರಿಕೆ ಮಾಡುವುದು ಅಪರಾಧದ ವರ್ಗಕ್ಕೆ ಸೇರುತ್ತೆ. ಅದೇ ರೀತಿ ಪೈರೇಟೆಡ್ ಚಲನಚಿತ್ರಗಳನ್ನ ಡೌನ್ ಲೋಡ್ ಮಾಡುವುದು ಸಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಕಾನೂನನ್ನ ಉಲ್ಲಂಘಿಸಿದ್ರೆ, 3 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.

ಬಾಂಬ್ ತಯಾರಿಸುವುದನ್ನು ತಮಾಷೆಗೂ ಗೂಗಲ್ʼನಲ್ಲಿ ಹುಡುಕಬೇಡಿ. ಯಾಕಂದ್ರೆ, ಬಾಂಬ್ ತಯಾರಿಕೆ ಮಾರ್ಗವನ್ನ ಕಂಡುಹಿಡಿಯುವುದು ಅಥವಾ ಬೇರೆ ಯಾವುದರ ಬಗ್ಗೆಯೂ ಹುಡುಕುವುದು ಅಪರಾಧ. ಅದಕ್ಕಾಗಿ ನೀವು ಶಿಕ್ಷೆಗೆ ಒಳಗಾಗಬಹುದು. ಅಂತಹ ಚಟುವಟಿಕೆಗಳನ್ನ ಸೈಬರ್ ಸೆಲ್ʼಗಳು ಮೇಲ್ವಿಚಾರಣೆ ಮಾಡುತ್ವೆ ಮತ್ತು ನಿಮ್ಮ ವಿವರಗಳನ್ನ ತಕ್ಷಣವೇ ಭದ್ರತಾ ಏಜೆನ್ಸಿಗಳಿಗೆ ತಿಳಿಸಬಹುದು.

ಗರ್ಭಪಾತ ಮಾಡುವುದು ಹೇಗೆಂದು ಇದಕ್ಕೆ ಸಂಬಂಧಿಸಿದಂತೆ ಸರ್ಚ್ ಮಾಡಿದ್ರೆ, ನೀವು ತೊಂದರೆಗೆ ಸಿಲುಕಬಹುದು. ಯಾಕಂದ್ರೆ, ಭಾರತೀಯ ಕಾನೂನಿನ ಪ್ರಕಾರ, ವೈದ್ಯರನ್ನು ಸಂಪರ್ಕಿಸದೆ ಗರ್ಭಪಾತ ಮಾಡುವುದು ಕಾನೂನುಬಾಹಿರ. ಅಂತಹ ಸಂದರ್ಭದಲ್ಲಿ, ನೀವು ಜೈಲಿಗೆ ಹೋಗಬಹುದು.

ಗೂಗಲ್ ಅಥವಾ ಸಾಮಾಜಿಕ ಮಾಧ್ಯಮ ಸೈಟ್ʼನಲ್ಲಿ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನ ಸೋರಿಕೆ ಮಾಡುವುದು ಗಂಭೀರ ಅಪರಾಧದ ವರ್ಗಕ್ಕೆ ಸೇರುತ್ತದೆ. ಇದಕ್ಕಾಗಿ ನೀವು ಜೈಲಿಗೆ ಹೋಗಬೇಕಾಗಬಹುದು. ಆಕಸ್ಮಿಕವಾಗಿ ಯಾರದೇ ಖಾಸಗಿ ಫೋಟೋ ಅಥವಾ ವಿಡಿಯೋವನ್ನು ಇಂಟರ್ನೆಟ್ʼನಲ್ಲಿ ಹಂಚಿಕೊಳ್ಳಬೇಡಿ.

ಮಕ್ಕಳ ಅಶ್ಲೀಲತೆಯ ಬಗ್ಗೆ ಭಾರತ ಸರ್ಕಾರ ತುಂಬಾ ಕಟ್ಟುನಿಟ್ಟಾಗಿದೆ. ಗೂಗಲ್ ಮಗುವನ್ನ ಹುಡುಕುವುದು, ನೋಡುವುದು ಅಥವಾ ಡೌನ್ ಲೋಡ್ ಮಾಡುವುದು ಅಪರಾಧದ ವರ್ಗಕ್ಕೆ ಬರುತ್ತದೆ. ಹಾಗೆ ಮಾಡುವುದರಿಂದ ನೀವು ಜೈಲು ಶಿಕ್ಷೆಗೆ ಗುರಿಯಾಗ್ಬೋದು.

Leave A Reply

Your email address will not be published.