ಛೆ ಇವರೆಂತ ಪೊಲೀಸರಪ್ಪ!! ಲೈಂಗಿಕ ಅಲ್ಪಸಂಖ್ಯಾತರನ್ನು ಠಾಣೆಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ ಸಿಬ್ಬಂದಿ-ತಡವಾಗಿ ಬೆಳಕಿಗೆ ಬಂದ ಪ್ರಕರಣದ ಹಿಂದಿದೆ ಅದೊಂದು ಕಾರಣ!??
ಅಲ್ಪಸಂಖ್ಯಾತರಿಗೂ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ಉದ್ಯೋಗ ಅವಕಾಶ ಕಲ್ಪಿಸುತ್ತಿದೆ.ಮೊದಮೊದಲು ತ್ರಿತೀಯ ಲಿಂಗಿಗಳು ಅಪರಾಧ ವೆಸಗಿದಾಗ ಶಿಕ್ಷತರನ್ನಾಗಿಸುತ್ತಾ ಬಂದಿದೆ. ಸದ್ಯ ಅವರುಗಳು ಕೂಡಾ ವಿದ್ಯಾವಂತರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವದ ಸ್ಥಾನ ಪಡೆಯಲು ಬಯಸಿದ್ದು,ಅದರಂತೆಯೇ ರಾಜ್ಯ ಪೊಲೀಸ್ ಇಲಾಖೆಯಲ್ಲೂ ಅಲ್ಪಸಂಖ್ಯಾತ ತ್ರಿತೀಯ ಲಿಂಗಿಗಳಿಗೆ ಶೇ.1 ರಷ್ಟು ಮೀಸಲಾತಿ ಇರಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರು ಹೇಳಿರುವ ಬೆನ್ನಲ್ಲೇ ತ್ರಿತೀಯ ಲಿಂಗಿಯೋರ್ವರು ಪೊಲೀಸರಿಂದಾದ ದೌರ್ಜನ್ಯ ವನ್ನು ನೆನೆಸಿಕೊಂಡಿದ್ದಾರೆ.
ಮೀಸಲಾತಿ ಕಲ್ಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಿವಾಸಿ ಅಶ್ವಿನಿ ರಾಜನ್ ‘ಪೊಲೀಸ್ ಇಲಾಖೆಯಲ್ಲಿ ಮೀಸಲಾತಿ ಕಲ್ಪಿಸಿರುವುದು ಸಂತಸದ ಸುದ್ದಿ, ಆದರೆ ನರರಾಕ್ಷಸರಂತೆ ನನ್ನ ಬಾಳಿನಲ್ಲಿ ಆತವಾಡಿದ ಪೊಲೀಸರನ್ನು ನೆನೆಸಿಕೊಂಡಾಗ ಇನ್ನೂ ನಮಗೆ ಭದ್ರತೆ ಇಲ್ಲ, ಆ ಘಟನೆ ನೆನೆಸಿಕೊಂಡಾಗ ಮನಸ್ಸಿಗೆ ಅತೀವ ನೋವಾಗುತ್ತದೆ ಎಂದು ಪೊಲೀಸರಿಂದ ತಮಗಾದ ಅನ್ಯಾಯವನ್ನು ನೆನೆಸಿಕೊಂಡಿದ್ದಾರೆ.
ಸಿಗ್ನಲ್ ನಲ್ಲಿ ಯಾರೋ ಮಾಡಿದ ತಪ್ಪಿಗೆ ತನ್ನನ್ನು ಠಾಣೆಗೆ ಕರೆದುಕೊಂಡು ಹೋಗಿ ಮನಸೋ ಇಚ್ಛೆ ಥಳಿಸಿ, ತಲೆಯನ್ನು ಗೋಡೆಗೆ ಚಚ್ಚಿದ ಪರಿಣಾಮ ಒಂದುವಾರ ಆಸ್ಪತ್ರೆ ಸೇರಿದ್ದೆ. ನನ್ನ ಹುಟ್ಟು, ನನ್ನ ಲಿಂಗದ ಬಗೆಗೆ ಕಟುವಾಗಿ ಮಾತನಾಡಿದ ಕೊಡಿಗೇಹಳ್ಳಿ ಪೊಲೀಸರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಇಂತಹ ನೀಚ ಪೊಲೀಸರಿಂದಾಗಿ ಪೊಲೀಸ್ ಇಲಾಖೆಯ ಮೇಲಿದ್ದ ನಂಬಿಕೆ ಹೋಗಿದೆ.ಸದ್ಯ ಮೀಸಲಾತಿ ಇರಿಸಿದ್ದು, ಇನ್ನು ನಮ್ಮ ಸಮುದಾಯದವರು ಇಲಾಖೆಗೆ ತೆರಳಿದರೆ ಯಾವ ರೀತಿಯ ಸೌಲಭ್ಯ, ಸ್ವಾತಂತ್ರ್ಯ ಸಮಾನತೆ ಸಿಗಬಹುದು ಎಂದು ಪ್ರಶ್ನಿಸಿದ್ದಾರೆ.