ಮುಸ್ಲಿಮರಿಗೆ ಮಾತ್ರ ಮಕ್ಕಳನ್ನು ಹುಟ್ಟಿಸಲು ತಿಳಿದಿದೆ ಎಂದು ಹೇಳಿ ವಿವಾದಕ್ಕೆ ನಾಂದಿ ಹಾಡಿದ ಸಚಿವ !!

ರಾಜಕೀಯ ವ್ಯಕ್ತಿಗಳ ಮಾತುಗಳು ಅದೆಷ್ಟೋ ಬಾರಿ ದೊಡ್ಡ ವಿವಾದವನ್ನೇ ಸೃಷ್ಟಿಸುತ್ತವೆ. ಅಂತೆಯೇ ಈ ಬಾರಿ ಉತ್ತರ ಪ್ರದೇಶದ ಸಚಿವ ಬಲದೇವ್ ಸಿಂಗ್ ಔಲಾಖ್ ಅವರು ಮುಸ್ಲಿಂ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಭಾರೀ ವಿವಾದವನ್ನು ಹುಟ್ಟು ಹಾಕಿದೆ.

 

ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್ ಸಂಪುಟದ ಜಲಶಕ್ತಿ ಸಚಿವ, ಮುಸ್ಲಿಂ ಸಮುದಾಯದ ಜನರಿಗೆ ಮಾತ್ರ ಮಕ್ಕಳನ್ನು ಹೇಗೆ ಹುಟ್ಟಿಸುವುದು ಎಂಬುದು ತಿಳಿದಿದೆ ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಜನರು ಕೇವಲ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ ಹಾಗೂ ಮಕ್ಕಳನ್ನು ಹುಟ್ಟಿಸುತ್ತಾರೆ. ಅವರ ಮಕ್ಕಳ ಶಿಕ್ಷಣ ಅಥವಾ ಉನ್ನತೀಕರಣ ಅವರಿಗೆ ಆದ್ಯತೆಯಾಗಿಲ್ಲ ಎಂದು ಉತ್ತರ ಪ್ರದೇಶದ ಬಿಲಾಸ್‌ಪುರದ ಬಿಜೆಪಿ ಶಾಸಕ ಹೇಳಿದ್ದಾರೆ.

ಈ ಹೇಳಿಕೆ ಇದೀಗ ಉತ್ತರ ಪ್ರದೇಶ ರಾಜ್ಯದಲ್ಲಿ ಭಾರಿ ವಿವಾದಕ್ಕೆ ನಾಂದಿ ಹಾಡಿದೆ. ಮುಸ್ಲಿಂ ಸಂಘಟನೆಗಳು ಸಚಿವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿವೆ.

Leave A Reply

Your email address will not be published.