ಕೆಎಫ್ ಸಿಯ ಟೇಕ್ ಅವೇ ವಿಂಗ್ಸ್ ಮೀಲ್ ಚಪ್ಪರಿಸುತ್ತಿದ್ದ ಮಹಿಳೆಗೆ ಸಿಕ್ಕಿತು ಗರಿ-ಗರಿ ಕರಿದ ‘ಕೋಳಿ ತಲೆ’
ಇತ್ತೀಚೆಗೆ ಅನೇಕ ವಿಡಿಯೋ, ಫೋಟೋ ಹೀಗೆ ಹಲವು ಆಹಾರಗಳ ಕಲಬೆರಕೆ ಬಗ್ಗೆ ಮಾಹಿತಿ ಹೊರ ಬೀಳುತ್ತಲೆ ಇದೆ. ಬೀದಿ ಬದಿ ವ್ಯಾಪಾರಿಗಳು ತಯಾರಿಸಿದ ಆಹಾರದಲ್ಲಿ ಕೊಳಕು ನೀರು ಉಪಯೋಗಿಸುವುದರಿಂದ ಹಿಡಿದು ಜ್ಯೂಸ್ ಬಾಟಲಿಗಳಲ್ಲಿ ಮಿರಿ-ಮಿರಿ ಮಿಂಚೋ ಹುಳದಿಂದ ಹಿಡಿದು ಎಲ್ಲಾ ಆಹಾರಗಳ ಬಂಡವಾಳದ ವಿಡಿಯೋ ವೈರಲ್ ಆಗೇ ಇದೆ.ಆದ್ರೆ ಇಲ್ಲೊಂದು ಕಡೆ ಆರ್ಡರ್ ಮಾಡಿದ ಫುಡ್ ನಲ್ಲಿ ಇತ್ತು ಕೋಳಿ ತಲೆ!!!!
ಹೌದು.ತುಂಬಾ ಜನರಿಗೆ ಫುಡ್ ಆರ್ಡರ್ ಮಾಡಿ ಮನೆಯಲ್ಲೇ ಸವಿಯೋ ಆಸೆ. ಉತ್ತಮ ಕ್ವಾಲಿಟಿ ಫುಡ್ ಅನ್ನೇ ಆರ್ಡರ್ ಮಾಡುತ್ತಾರೆ.ಅದರಲ್ಲೂ ಕೆಎಫ್ ಸಿ ಸ್ವಲ್ಪ ಮಟ್ಟಿಗಾದರೂ ಹೆಚ್ಚಿನ ಗ್ರಾಹಕರ ಮನಮೆಚ್ಚಿದೆ. ಆದ್ರೆ ಇಲ್ಲಿ ಕೆಎಫ್ ಸಿ ಮಾಡಿದ ಎಡವಟ್ಟು ನೋಡಿದ್ರೆ ಇನ್ನು ಇದನ್ನು ತಿನ್ನಬೇಕೆ? ಎಂಬ ಪ್ರಶ್ನೆ ಹುಟ್ಟೋದಂತೂ ಖಚಿತ.
ಕೆಎಫ್‌ಸಿ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿ ಕೊಕ್ಕಿನೊಂದಿಗೆ ಪೂರ್ಣ ಕೋಳಿಯ ತಲೆಯನ್ನು ಕಂಡು ಮಹಿಳೆ ಆಘಾತಕ್ಕೊಳಗಾದ ಘಟನೆ ಯುಕೆನಲ್ಲಿ ನಡೆದಿದೆ.ಗೇಬ್ರಿಯೆಲ್ ಎಂದು ಗುರುತಿಸಲಾದ ಗ್ರಾಹಕರು, ಇಂಗ್ಲೆಂಡ್‌ನ ಟ್ವಿಕನ್‌ಹ್ಯಾಮ್‌ನಲ್ಲಿರುವ ಕೆಎಫ್‌ಸಿ ಔಟ್‌ಲೆಟ್‌ನಿಂದ ಟೇಕ್ ಅವೇ ಊಟವನ್ನು ಆರ್ಡರ್ ಮಾಡಿದ್ದಾರೆ. ಈ ವೇಳೆ ತನ್ನ ಹಾಟ್ ವಿಂಗ್ಸ್ ಮೀಲ್‌ನಲ್ಲಿ ಫ್ರೈಡ್ ಚಿಕನ್ ಹೆಡ್ ಅನ್ನು ಕಂಡುಕೊಂಡಿದ್ದಾಗಿ ತಿಳಿಸಿದ್ದಾರೆ. ಇದರ ಫೋಟೋ ಕ್ಲಿಕ್ಕಿಸಿದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೋಳಿಯ ಕಣ್ಣುಗಳು ಮತ್ತು ಕೊಕ್ಕಿನಿಂದ ಸಂಪೂರ್ಣ ತಲೆಯಿರುವುದನ್ನು ಫೋಟೋದಲ್ಲಿ ನೋಡಬಹುದು.ಇನ್ಸ್ಟಾಗ್ರಾಂನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಚಿತ್ರ ನೋಡಿದ ನೆಟ್ಟಿಗರು ಕೂಡ ದಿಗ್ಭ್ರಮೆಗೊಂಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿ, ಈ ಫೋಟೋದಿಂದ ನಾವು ನಿಜವಾಗಿಯೂ ಆಶ್ಚರ್ಯಗೊಂಡಿದ್ದೇವೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಇನ್ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದೆ.
ಈ ಬಗ್ಗೆ ತನಿಖೆ ನಡೆಸಲು ತಂಡವನ್ನು ರಚಿಸಿದ್ದೇವೆ. ಅಪರೂಪದ ಸಂದರ್ಭಗಳಲ್ಲಿ ತಪ್ಪಾಗಿ ಹೋಗುತ್ತವೆ ಮತ್ತು ಇದು ನಂಬಲಾಗದಷ್ಟು ಅಪರೂಪವಾಗಿದೆ. ಭವಿಷ್ಯದಲ್ಲಿ ಅಂತಹ ಯಾವುದೇ ಘಟನೆ ನಡೆಯದಂತೆ ತಡೆಯಲು ಸರಿಯಾದ ತಪಾಸಣೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೆಎಫ್‌ಸಿ ಭರವಸೆ ನೀಡಿದೆ.
ಇದೇ ವೇಳೆ ಯುಕೆ ಮಹಿಳೆ ಗೇಬ್ರಿಯಲ್ ಅವರನ್ನು ಉಚಿತ ಕೆಎಫ್‌ಸಿ ಊಟಕ್ಕೆ ಆಹ್ವಾನಿಸಲಾಗಿದೆ ಮತ್ತು ಅವರ ಭಯವನ್ನು ನಿವಾರಿಸಲು ಅಡಿಗೆ ಪ್ರಕ್ರಿಯೆಗಳನ್ನು ಸಹ ತೋರಿಸಲಾಗಿದೆ. ಗ್ಯಾಬ್ರಿಯೆಲ್ ಶೀಘ್ರದಲ್ಲೇ ನಮಗೆ 5-ಸ್ಟಾರ್ ವಿಮರ್ಶೆಗಳನ್ನು ಬಿಟ್ಟು ಹಿಂತಿರುಗುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಕೆಎಫ್‌ಸಿ ಹೇಳಿದೆ.ಅಂತೂ ಕೆಎಫ್ ಸಿ ಕೋಳಿ ತಲೆ ಕೂಡ ಫುಲ್ ಫೇಮಸ್… ಮುಂದೆ ಇಂತಹುದೇ ‘ಫ್ರೈಡ್ ಚಿಕನ್ ಹೆಡ್ ‘ಸ್ಪೆಷಲ್ ಫುಡ್ ಮುಂದೆ ಬರಬಹುದೊ ಏನು? ಹೇಳೋಕಾಗಲ್ಲ ಅಲ್ವಾ..