ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಪುತ್ತೂರು : ದೇವಸ್ಥಾನ ಮತ್ತು ವೇದ ಗ್ರಂಥಗಳಿಂದ ಹಿಂದು ಧರ್ಮ ಸದಾ ಜಾಗೃತವಾಗಿದೆ ಎಂದು‌ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕೀರಿ ಹೇಳಿದರು.

ಬುಧವಾರ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ದೇವಾಲಯ‌ ನಮ್ಮೊಳಗಿನ ಚೈತನ್ಯ ವೃದ್ಧಿಸುವ ಶಕ್ತಿ ಕೇಂದ್ರ. ದೇವರೊಂದಿಗೆ ಅನುಸಂಧಾನಕ್ಕೆ – ಭಜನೆ, ಸತ್ಸಂಗ ಮಾರ್ಗ ಸುಲಭ ಮಾರ್ಗ. ಇದರಿಂದ ಮನುಷ್ಯನೊಳಗಿನ ಅರಿಷಡ್ ವೈರಿಗಳು ಕಳೆದು ಹೋಗುತ್ತವೆ‌. ಸ್ವಾರ್ಥ ಮರೆತು ನಮ್ಮದು ಎಂಬ ಭಾವನೆ ಮೂಡುತ್ತದೆ ಎಂದರು.

ಧಾರ್ಮಿಕ ಕೇಂದ್ರಗಳು ವ್ಯವಹಾರ ಸ್ಥಳವಾಗಬಾರದು ಎಂದ ಅವರು, ಸ್ವಾರ್ಥ ಇಲ್ಲದಿದ್ದರೆ ಲೆಕ್ಕಾಚಾರ ಇರುವುದಿಲ್ಲ.‌ ಲೆಕ್ಕಾಚಾರ ಇಲ್ಲದ ಬದುಕು ಪಕ್ವಗೊಳ್ಳುತ್ತದೆ ಎಂದು ಹೇಳಿದರು.

ಉಪನ್ಯಾಸಕ ಪ್ರವೀಣ್ ಎಸ್ ಡಿ ಮಾತನಾಡಿ, ಧರ್ಮ ಸಂಸ್ಕತಿ, ಪ್ರಕೃತಿ ಉಳಿದರೆ ಮಾತ್ರ ಸುಂದರ ಬದುಕು ಸಾಧ್ಯ. ಯುವ ಜನತೆ ದಾರಿ ತಪ್ಪಿದರೆ ಹಿಂದು‌ ಧರ್ಮಕ್ಕೆ ‌ದೊಡ್ಡ ಪೆಟ್ಟು. ಈ ನಿಟ್ಟಿನಲ್ಲಿ ನೈತಿಕ ಶಿಕ್ಷಣಕ್ಕೆ‌ ಪ್ರಾಮುಖ್ಯತೆ ಕೊಡಬೇಕು. ಪ್ರಕೃತಿ ಕಾಳಜಿ ಎಲ್ಲರಲ್ಲೂ ಬಳೆಯಬೇಕು ಎಂದರು.

ವ್ಯಾಟ್ಸಾಪ್ ಗ್ರೂಪ್ ಮೂಲಕವೇ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ 1.5 ಕೋಟಿ ಸಂಗ್ರಹ !!

ಭಾರತೀಯ ಜೀವ ವಿಮಾ‌ ನಿಗಮದ ಸಲಹೆಗಾರ ರತ್ನಾಕರ ರೈ ಕೆದಂಬಾಡಿಗುತ್ತು ಅಧ್ಯಕ್ಷ ತೆ‌ ವಹಿಸಿದ್ದರು.

ನಿವೃತ್ತ ಮುಖ್ಯಗುರು ಗುರುರಾಜ್ ತೌಡಿಂಜ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಜಯಸೂರ್ಯ ರೈ ಮಾದೋಡಿ, ಪ್ರಮುಖರಾದ ಬಾಲಚಂದ್ರ ಶೆಟ್ಟಿ ಸೊರಕೆ,‌ ಗೋವಿಂದ ಭಟ್ ನೆಕ್ಕಿತ್ತಡ್ಕ, ಪ್ರೇಮಾ‌ಬಾವಿಕಟ್ಟೆ, ಬೆಳಿಯಪ್ಪ ಗೌಡ ಸರ್ವೆ, ‌ಪ್ರವೀಣ ರದೈ ಮೇಗಿನಗುತ್ತು, ಜಯಂತಿ ನೆಕ್ಕಿತ್ತಡ್ಕ, ಕುಕ್ಕ ಕಾಡಬಾಗಿಲು, ಲಕ್ಷ್ಮೀಶ ರೈ ಸರ್ವೆ, ಲೋಕೇಶ್ ಗೌಡ ತಂಬುತ್ತಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಕಾರ್ಯಾಧ್ಯಕ್ಷ ಆನಂದ ಭಂಡಾರಿ ಸೊರಕೆ, ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ ಉಪಸ್ಥಿತರಿದ್ದರು.

ಗುರುವಾರ ಬೆಳಗ್ಗೆ ಶಾಂತಿ ‌ಹೋಮಗಳು,‌ ಹೋಮಗಳ ಕಲಶಾಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಾಯಂಕಾಲ ಅಂಕುರ ಪೂಜೆ, ಮಂಟಪ‌ ನಮಸ್ಕಾರ, ಅನುಜ್ಞಾ ಕಲಶ ಪೂಜೆ, ಅಭಿವಾಸ ಹೋಮ, ಕಲಶಾಭಿಷೇಕ ನಡೆಯಿತು.‌ಸಾವಿರಾರು ಮಂದಿ‌ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಸಾಯಂಕಾಲ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಅವರಿಂದ ಭರತನಾಟ್ಯ, ಕಟೀಲ್ದಪ್ಪೆ ಉಳ್ಳಾಲ್ದಿ ನಾಟಕ ಪ್ರದರ್ಶನ ನಡೆಯಿತು

ದೆಪ್ಪುಲೆ ಒಂಜಿ ಸೆಲ್ಫಿ ಒಂಜಿ ಚೂರು ತೆಲ್ಪಿ ಭಕ್ತಾದಿಗಳನ್ನು ಆಕರ್ಷಿಸುತ್ತಿರುವ ಸೆಲ್ಫಿ ಪಾಯಿಂಟ್ 

ಇಂದಿನ ಕಾರ್ಯಕ್ರಮ
ಡಿ.24ರಂದು ವಿವಿಧ ವೈದಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಸಾಂಸ್ಜೃತಿಕ ಕಾರ್ಯಕ್ರಮವಾಗಿ ಮಧ್ಯಾಹ್ನ ಕರ್ಣಾರ್ಜುನ‌ಕಾಳಗ ಯಕ್ಷಗಾನ ತಾಳಮದ್ದಳೆ, ಸಾಯಂಕಾಲ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ.

Leave A Reply

Your email address will not be published.