ವಿದೇಶದಿಂದ ಬಂದಿದ್ದ ಮಹಿಳೆ ತಂದಿದ್ದಳು ಚಿನ್ನ!! ಪೊಲೀಸರು ಹುಡುಕದ ಜಾಗದಲ್ಲಿ ಇರಿಸಿಕೊಂಡರೆ ಗೊತ್ತಾಗುವುದಿಲ್ಲವೆಂದು ನಂಬಿದ್ದ ಆಕೆ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ!??

ಬೆಂಗಳೂರು: ಇಲ್ಲೊಬ್ಬಳು ವಿದೇಶಿ ಮಹಿಳೆ ವಿದೇಶದಿಂದ ಬರುವಾಗ ಚಿನ್ನ, ಡ್ರಗ್ಸ್ ತಂದಿದ್ದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.ಒಟ್ಟು 26.11 ಲಕ್ಷ ಮೌಲ್ಯದ ಸೊತ್ತನ್ನು ಆಕೆ ಬಚ್ಚಿಟ್ಟು ತಂದಿದ್ದಾದರೂ ಯಾವ ಜಾಗದಲ್ಲಿ ಗೊತ್ತಾ??. ಕಸ್ಟಮ್ ಅಧಿಕಾರಿಗಳೇ ಅರೆಕ್ಷಣ ತಬ್ಬಿಬ್ಬಾಗಿದ್ದಾರೆ.

 

ಹೌದು. ಇಂತಹದೊಂದು ಘಟನೆ ನಡೆದದ್ದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ. ವಿದೇಶದಿಂದ ಬಂದಿದ್ದ ಮಹಿಳೆಯೋರ್ವಳು ತನ್ನ ಗುದಾನಾಳದೊಳಗೆ ಚಿನ್ನವನ್ನು ಮಾತ್ರೆಯ ರೂಪದಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದಳು. ಮೂಲಹಃ ಆಫ್ರಿಕನ್ ಮಹಿಳೆಯಾಗಿದ್ದು, ಅನುಮಾನಾಸ್ಪದವಾಗಿ ಕಂಡುಬಂದ ಈಕೆಯನ್ನು ಪರಿಶೀಲಿಸಿದಾಗ ಉತ್ತರಿಸಲು ತಡವರಿಸಿದ್ದಾಳೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಬಚ್ಚಿಟ್ಟ ಗುಟ್ಟು ರಟ್ಟಾಗಿದೆ. ಸದ್ಯ ಆಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Leave A Reply

Your email address will not be published.