ಜೈಲಿನಲ್ಲಿದ್ದೇ ಸಂಪಾದಿಸಿದ 215 ಕೋಟಿ ರೂ! | ಯಾರೀತ ಇಂತಹ ಖತರ್ನಾಕ್ ಕಿಲಾಡಿ

Share the Article

ಸುಕೇಶ್ ಚಂದ್ರಶೇಖರ್…ಈ ಹೆಸರು ಕಳೆದ ಕೆಲದಿನಗಳಿಂದ ಭಾರಿ ಸದ್ದು ಮಾಡುತ್ತಿದೆ.

215 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಈ ಖದೀಮನ ಜೀವನ ಚರಿತ್ರೆಯೇ ಭಾರೀ ರೋಚಕವಾಗಿದೆ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಈ ಖದೀಮ 12ನೇ ಕ್ಲಾಸಿಗೆ ಡ್ರಾಪ್‌ಔಟ್ ಆಗಿದ್ದವ.

ಚಿಕ್ಕ ವಯಸ್ಸಿನಲ್ಲೇ ಹಲವಾರು ವ್ಯವಹಾರ ನಡೆಸಿ ಕೈ ಸುಟ್ಟುಕೊಂಡಿದ್ದ ಈತ ಕೊನೆಗೆ ಹಿಡಿದಿದ್ದು ಮೋಸದ ಜಾಲ. ಹಲವಾರು ಬಾರಿ ಜೈಲಿಗೆ ಹೋಗಿದ್ದ ಈತ ಜೈಲಿನಲ್ಲಿ ಇದ್ದುಕೊಂಡೇ ಭಾರಿ ವ್ಯವಹಾರ ಕುದುರಿಸಿ ಬರೋಬ್ಬರಿ 215 ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದಾನೆ.

ಅದಾಗಲೇ ವಿವಿಧ ತಂತ್ರಜ್ಞಾನದಲ್ಲಿ ಪಳಗಿದ್ದ, ಸುಕೇಶ್, ದೊಡ್ಡ ದೊಡ್ಡ ರಾಜಕಾರಣಿಗಳ, ಸಚಿವರ ಮನೆ , ಕಛೇರಿಗಳ ಫೋನ್ ಹ್ಯಾಕಿಂಗ್ ಮಾಡುವ ತಂತ್ರಜ್ಞಾನದಲ್ಲಿ ಪಳಗಿಬಿಟ್ಟಿದ್ದ. ಇದೇ ರೀತಿ ವಿವಿಧ ಬಾಲಿವುಡ್ ನಟಿಯರಿಗೂ ಅಮಿಷ ಬಡ್ಡಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದ.

Leave A Reply