ಇಲ್ಲಿ ಅರ್ಧ ಕೆ.ಜಿ ಟೊಮೆಟೊ ಮತ್ತು 1 ಕೆ.ಜಿ ಸಕ್ಕರೆಗೆ ಕೇವಲ ಒಂದೇ ರೂಪಾಯಿ!! | ಅತಿ ದುಬಾರಿ ಬೆಳೆಯತ್ತ ಹೆಜ್ಜೆ ಹಾಕುತ್ತಿರುವ ಟೊಮೆಟೊ ಇಷ್ಟು ಅಗ್ಗದ ಬೆಲೆಗೆ ಎಲ್ಲಿ ಸಿಗುತ್ತೆ ಗೊತ್ತಾ??
ಭಾರತದ ಅತ್ಯಂತ ಜನಪ್ರಿಯ ಇ-ಕಾಮರ್ಸ್ ಸೇವೆಯಲ್ಲಿ ಸೈ ಎನಿಸಿಕೊಂಡಿರುವುದು ಅಮೆಜಾನ್. ಪ್ರತಿದಿನ ಅಮೆಜಾನ್ ತನ್ನ ಗ್ರಾಹಕರಿಗಾಗಿ ಏನಾದರೊಂದು ಕೊಡುಗೆಯನ್ನು ನೀಡುತ್ತಿರುತ್ತದೆ. ಮಾತ್ರವಲ್ಲದೆ ಕಡಿಮೆ ಬೆಲೆಗೆ ವಸ್ತುಗಳನ್ನು, ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುತ್ತದೆ. ಹಾಗೆಯೇ ಇದೀಗ ದಿನಸಿ ವಸ್ತುಗಳ ಮೇಲೆ ಅದ್ಭುತವಾದ ರಿಯಾಯಿತಿಯನ್ನು ನೀಡಿದೆ. ನೀವು ಪಡಿತರವನ್ನು ಖರೀದಿಸಲು ಬಯಸುತ್ತಿದ್ದು, ಆಫರ್ ಗಳಿಗಾಗಿ ಕಾಯುತ್ತಿದ್ದರೆ, ಇಂದು ಅದಕ್ಕೆ ಸುವರ್ಣಾವಕಾಶ ಒದಗಿಬಂದಿದೆ ಎನ್ನಬಹುದು.
ಅಮೆಜಾನ್ ನಲ್ಲಿ ದಿನಸಿ ವಸ್ತುಗಳ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಫ್ರೆಶ್ ಡೀಲ್ಸ್ @ Rs 1 ರ ಅಡಿಯಲ್ಲಿ ಟೊಮ್ಯಾಟೊ ಮತ್ತು ಸಕ್ಕರೆಯನ್ನು ಪಟ್ಟಿ ಮಾಡಲಾಗಿದೆ. ಇಂದಿನ ಫ್ರೆಶ್ ಡೀಲ್ ನಲ್ಲಿ ಟೊಮ್ಯಾಟೊ ಮತ್ತು ಸಕ್ಕರೆಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಕೇವಲ 1 ರೂಪಾಯಿಯಲ್ಲಿ ಅರ್ಧ ಕೆಜಿ ಟೊಮೆಟೊ ಖರೀದಿಸಿ :
ಅರ್ಧ ಕಿಲೋ ಟೊಮೆಟೊವಿನ ಮಾರುಕಟ್ಟೆ ಬೆಲೆ 45 ರೂ. ಆದರೆ ಇಂದು ಟೊಮೆಟೊ ಮೇಲೆ ಶೇ.97ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ, ಅರ್ಧ ಕಿಲೋ ಟೊಮೆಟೊವನ್ನು ಕೇವಲ 1 ರೂಪಾಯಿಗೆ ಖರೀದಿಸಬಹುದು. ಆದರೆ, ಆಫರ್‌ನಲ್ಲಿ ನೀವು ಕೇವಲ ಅರ್ಧ ಕಿಲೋ ಟೊಮೆಟೊಗಳನ್ನು ಮಾತ್ರ ಖರೀದಿಸಲು ಸಾಧ್ಯವಾಗುತ್ತದೆ.
ಅಮೆಜಾನ್ ಬ್ರಾಂಡ್ ವೇದಕಾದ ಒಂದು ಕೆಜಿ ಸಕ್ಕರೆ ಪ್ಯಾಕೆಟ್ ಅನ್ನು ಕೂಡಾ ಕೇವಲ 1 ರೂಪಾಯಿಗೆ ಖರೀದಿಸಬಹುದು. ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ 70 ರೂ.ಯಾಗಿದೆ. ಅಂದರೆ ಇಲ್ಲಿ ಶೇ.98ರಷ್ಟು ರಿಯಾಯಿತಿ ಸಿಗುತ್ತಿದೆ. ಇಲ್ಲಿಯೂ ನಿಮಗೆ ಆಫರ್‌ನಲ್ಲಿ ಕೇವಲ ಒಂದು ಕೆಜಿ ಸಕ್ಕರೆ ಮಾತ್ರ ಸಿಗುತ್ತದೆ.
10 ಕೆಜಿಯ ಆಶೀರ್ವಾದ ಹಿಟ್ಟಿನ ಬೆಲೆ 375. ಆದರೆ ಆಫರ್‌ನಲ್ಲಿ ಅದನ್ನು 349 ರೂ.ಗೆ ಖರೀದಿಸಬಹುದು. ಇದಲ್ಲದೇ ಇತರೆ ವಸ್ತುಗಳ ಮೇಲೆ ಶೇ.40ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಚಿಪ್ಸ್ ಮತ್ತು ತಿಂಡಿಗಳ ಮೇಲೆ 20% ರಿಯಾಯಿತಿ ಪಡೆಯಬಹುದು. ನೀವು ಅರ್ಧ ಕೆಜಿ ಟೊಮ್ಯಾಟೊ, ಒಂದು ಕೆಜಿ ಸಕ್ಕರೆ ಮತ್ತು 10 ಕೆಜಿ ಹಿಟ್ಟಿನ ಪ್ಯಾಕೆಟ್ ಅನ್ನು ಖರೀದಿಸಿದರೆ, ಒಟ್ಟು 351 ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ.