ಸರ್ವೆ : ಸಂತಾನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶ,ಧಾರ್ಮಿಕ ಕಾರ್ಯಕ್ರಮ
ಸವಣೂರು: ದೇವಾಲಯ ನಮ್ಮ ಧಾರ್ಮಿಕ ಪರಂಪರೆ ಮುಂದುವರಿಸಲು ಒಂದು ಸೇತುವೆ ಎಂದು ಮುಂಡೂರು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ ಹೇಳಿದರು.
ಮಂಗಳವಾರ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಪುನಃ ನಿರ್ಮಾಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸರ್ವೆಯಲ್ಲಿ ಭವ್ಯ ದೇಗುವ ನಿರ್ಮಾಣ ದ ಮೂಲಕ ಮುಂದಿನ ಜನಾಂಗಕ್ಕೆ ನಮ್ಮ ಪರಂಪರೆ ಮುಂದುವರಿಸಲು ಅಕಾಶ ಮಾಡಿಕೊಟ್ಟಂತಾಗಿದೆ. ಸಂಪೂರ್ಣ ಶರಣಾಗತಿಯಿಂದ ದೇವರ ಒಲುಮೆ ಸಾಧ್ಯ ಎಂದರು.
ಕಲ್ಲಮ ರಾಘವೇಂದ್ರ ಮಠದ ಮೊಕ್ತೇಸರ ಡಾ.ಸೀತಾರಾಮ ಭಟ್ ಕಲ್ಲಮ ಮಾತನಾಡಿ, ಸಾಧನೆಯ ಛಲ, ಒಗ್ಗಟ್ಟಿನಿಂದ ಯಾವುದೇ ಅಡೆತಡೆಗಳಿದ್ದರೂ ಗೆಲುವು ಸಾಧ್ಯ. ಗ್ರಾಮಸ್ಥರ ಒಗ್ಗಟ್ಟಿನಿಂದ ಅದ್ಭುತ ದೇಗುಲ ನಿರ್ಮಾಣ ಸಾಧ್ಯವಾಗಿದೆ. ನಾವು ಬೆರಗಾಗುವಂಥ ಆಲಯವನ್ನು ಗ್ರಾಮಸ್ಥರು ಸುಬ್ರಹ್ಮಣ್ಯನಿಗೆ ನಿರ್ಮಿಸಿ ಕೊಟ್ಟಿದ್ದಾರೆ ಎಂದರು.
ದೇವಳದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ನಳಿನಿ ಲೋಕಪ್ಪ ಗೌಡ ಮಾತನಾಡಿ, ಕರೊನಾ ಸಂಕಷ್ಟ ಕಾಲಘಟ್ಟದಲ್ಲೂ ದೇವರ ಕೃಪೆಯಿಂದ ನಿರಂತರವಾಗಿ ದೇವಸ್ಥಾನ ನಿರ್ಮಾಣ ಕೆಲಸ ನಡೆದಿದಿದೆ. ದೇವರಿಗೆ ಪ್ರಿಯ ಆಗುವಂಥ ಶ್ರಮದಾನ ಜನರಿಂದ ನಡೆದಿದೆ ಎಂದರು.
ನಿವೃತ್ತ ಮುಖ್ಯ ಗುರು ಮಹಾಬಲ ರೈ ಮೇಗಿನಗುತ್ತು, ಉದ್ಯಮಿ ಸರಸ್ವತಿ ಗಂಗಾಧರ ರೈ ಬೋಳಂತೂರು, ಪುಂಜಾಲಕಟ್ಟೆ ಠಾಣೆ ಉಪನಿರೀಕ್ಷಕ ಕುಟ್ಟಿ ಎಂ ಕೆ , ಗ್ರಾಮಕರಣಿಕರಾದ ತುಳಸಿ , ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಮಕೃಷ್ಣ ರೈ ಏಳ್ಮುಡಿ, ಗ್ರಾಪಂ ಸದಸ್ಯರಾದ ಕರುಣಾಕರ ಗೌಡ ಎಲಿಯ, ಪ್ರವೀಣ ನಾಯ್ಕ ನೆಕ್ಕಿತ್ತಡ್ಕ, ಸರ್ವೆ ಹಿಂಜಾವೇ ಅಧ್ಯಕ್ಷ ಜಯಂತ ಭಕ್ತಕೋಡಿ, ಸರ್ವೆ ಧರ್ಮಸ್ಥಳ ಗ್ರಾಮಭಿವೃದ್ದೀ ಯೋಜನೆ ಬಿ ಒಕ್ಕೂಟದ ಅಧ್ಯಕ್ಷ ಅಶೋಕ್ ಎಸ್.ಡಿ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಕಾರ್ಯಾಧ್ಯಕ್ಷ ಆನಂದ ಭಂಡಾರಿ ಸೊರಕೆ, ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ,
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಎನ್ ಎಸ್ ಡಿ ಸರ್ವೆ ದೋಳಗುತ್ತು, ಆರ್ಥಿಕ ಸಮಿತಿ ಸಂಚಾಲಕ ಜಿ.ಕೆ. ಪ್ರಸನ್ನ ಕಲ್ಲಗುಡ್ಡೆ, ಪ್ರಧಾನ ಅರ್ಚಕ ಶ್ರೀ ರಾಮ ಕಲ್ಲೂರಾಯ ಉಪಸ್ಥಿತರಿದ್ದರು.
ಬುಧವಾರ ಗಣಪತಿ ಹೋಮ, ಉಷಃ ಪೂಜೆ,
ಅಂಕುರ ಪೂಜೆ, ಚಂಬ ಶುದ್ದಿ, ಪ್ರಾಯಶ್ಚಿತ್ತ ಹೋಮಗಳು, ಹೋಮದ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ
ಸಂಜೆ ದುರ್ಗಾ ನಮಸ್ಕಾರ ಪೂಜೆ, ಅಂಕುರ ಪೂಜೆ,
ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ,ಸಾಯಂಕಾಲ ಧಾರ್ಮಿಕ ಸಭಾ ಕಾರ್ಯಕ್ರಮ, ಗ್ರಾಮದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಗಾನ ವೈಭವ ಕಾರ್ಯಕ್ರಮ ನಡೆಯಿತು.ಅನ್ನಸಂತರ್ಪಣೆಯಲ್ಲಿಸಾವಿರಾರು ಮಂದಿ ಪಾಲ್ಗೊಂಡರು.
ಡಿಸೆಂಬರ್ 23 ರಂದು ಬೆಳಗ್ಗೆ ಶಾಂತಿ ಹೋಮಗಳು,ಹೋಮಗಳ ಕಲಶಾಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಾಯಂಕಾಲ ಅಂಕುರ ಪೂಜೆ, ಮಂಟಪ ನಮಸ್ಕಾರ, ಅನುಜ್ಞಾ ಕಲಶ ಪೂಜೆ, ಅಭಿವಾಸ ಹೋಮ, ಕಲಶಾಭಿಷೇಕ, ಅನ್ನಸಂತರ್ಪಣೆ ನಡೆಯಲಿದೆ.