ಸತ್ತ ಮೀನು ಮತ್ತೆ ಜೀವಂತ |ಪ್ಯಾನ್ ನಲ್ಲಿ ಫ್ರೈ ಮಾಡುವಾಗ ಟಪ-ಟಪ ಕುಣಿದಾಡಿದ ಮೀನು
ಮೀನುಗಳಿಗೆ ನೀರೇ ಪ್ರಪಂಚ. ಒಂದು ವೇಳೆ ಹೆಚ್ಚು ಹೊತ್ತು ನೀರೊಳಗಿರುವ ಮೀನುಗಳು ಹೊರಗೆ ಬಂದ್ರೆ ಬದುಕುವ ಸಾಧ್ಯತೆಗಳೇ ಇಲ್ಲ.ಸಾಮಾನ್ಯವಾಗಿ ಮೀನುಗಳನ್ನು ಮಾರ್ಕೆಟ್ ನಲ್ಲಿ ಖರೀದಿಸುವಾಗಲೇ ಸತ್ತಿರುತ್ತವೆ. ಆದರೆ, ಇಲ್ಲೊಂದೆಡೆ ಸತ್ತ ಮೀನು ಮತ್ತೆ ಜೀವಂತ!!
ಟಿಕ್‌ಟಾಕ್‌ನಲ್ಲಿ ಮೀನಿನ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ‘ಜೊಂಬಿ ಮೀನು’ ಎಂದು ಕರೆದಿದ್ದಾರೆ. ಚೀನಾದ ಝೆಂಗ್‌ಝೌನಲ್ಲಿ ವೆನ್ ಎಂಬಾತ ಎಂದಿನಂತೆ ಮಾರುಕಟ್ಟೆಗೆ ತೆರಳಿ ಮೀನು ಖರೀದಿಸಿದ್ದ. ಮನೆಗೆ ಬಂದ ಅದನ್ನು ಪ್ಯಾನ್ ನಲ್ಲಿ ಹಾಕಿ ಫ್ರೈ ಮಾಡಲು ಸಿದ್ಧತೆ ನಡೆಸಿದ್ದಾನೆ. ಈ ವೇಳೆ ಸತ್ತಿದ್ದ ಮೀನು ಇದ್ದಕ್ಕಿದ್ದಂತೆ ಚಲಿಸಲಾರಂಭಿಸಿದ್ದು,ಇದನ್ನು ನೋಡಿದ ವೆನ್ ದಿಗ್ಭ್ರಮೆಗೊಂಡಿದ್ದಾನೆ.
ಮೀನನ್ನು ಪ್ಯಾನ್ ಗೆ ಹಾಕಿದಾಗ ಅದರ ಶಾಖದಿಂದಾಗಿ ನರಗಳು ಜೀವಂತವಾಗಿವೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ಆಕ್ಟೋಪಸ್ ಅನ್ನು ಸೀಫುಡ್ ರೆಸ್ಟೋರೆಂಟ್‌ನಲ್ಲಿ ಬೇಯಿಸುವಾಗ ಬಾಣಸಿಗರು ತುಂಡುಗಳಾಗಿ ಕತ್ತರಿಸಿದರೂ ಅದು ಅಲುಗಾಡಲು ಪ್ರಾರಂಭಿಸಿದ್ದ ಘಟನೆಯನ್ನು ನೆನಪಿಸಿದ್ದಾರೆ.ಈ ರೀತಿಯ ಮೀನುಗಳನ್ನು ಖರೀದಿಸುವುದು ಒಳ್ಳೆಯದು. ಏಕೆಂದರೆ ಅದು ತಾಜಾವಾಗಿದೆ ಎಂದರ್ಥ ಎಂದು ಮತ್ತೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆ ಪ್ಯಾನ್ ನಲ್ಲಿ ಮೀನು ಟಪ ಟಪ ಹಾರಿ ಒದ್ದಾಡಿದ್ದೆ ವಿಚಿತ್ರ. ಆದ್ರೆ ಅದರ ಪ್ರಾಣ ಮಾತ್ರ ಉಳಿಸೋಕೆ ಮನಸೇ ಬಂದಿಲ್ವೋ ಏನು!!ಅಂತೂ ಈತ ತನ್ನ ಹೆಂಡತಿಗೆ ಒಮ್ಮೆ ಮೀನಿನ ಖಾದ್ಯವನ್ನು ಬಡಿಸುವ ಎನ್ನುವ ಯೋಚನೆಲಿ, ಅದು ಯಾವಾಗ ಚಲನೆಯನ್ನು ನಿಲ್ಲಿಸುತ್ತದೆಯೋ ಎಂದು ನೋಡಲು ಕಾದುಕುಳಿತಿದ್ದ. ಅಂತೂ ಈ ಘಟನೆ ಆತನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ.ಈ ವಿಡಿಯೋವನ್ನು ವೆನ್ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.