ನಟಿ ಐಶ್ವರ್ಯ ರೈಗೆ ಸಮನ್ಸ್ ನೀಡಿದ ಇ.ಡಿ !! | ಬಾಲಿವುಡ್ ನಟಿಗೆ ಎದುರಾಯಿತೇ ವಿಚಾರಣೆಯ ಸಂಕಷ್ಟ ?!

Share the Article

ಬಾಲಿವುಡ್ ನಟಿ ಐಶ್ವರ್ಯ ರೈಗೆ ಇದೀಗ ಸಂಕಷ್ಟ ಎದುರಾಗಿದೆ. ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಗೆ ಇ.ಡಿ ಸಮನ್ಸ್ ನೀಡಿದ್ದು, ಈ ಮೂಲಕ ಪ್ರಕರಣದ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ನಲ್ಲಿ ತಿಳಿಸಿದೆ.

ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಚ್ಚನ್ ಕುಟುಂಬದ ಹೆಸರು ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಇ.ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಇ.ಡಿ.ಯ ಎಚ್ ಐಯು ಈ ಬಗ್ಗೆ ತನಿಖೆ ನಡೆಸುತ್ತಿದೆ. ಇದೀಗ ಪ್ರಕರಣ ಸಂಬಂಧ ಬಾಲಿವುಡ್ ನಟಿ ಐಶ್ವರ್ಯ ರೈಗೆ ಇಡಿ ಸಮನ್ಸ್ ಜಾರಿ ಮಾಡಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ ನಟಿ ಐಶ್ವರ್ಯ ರೈ ಪ್ರಕರಣ ಕುರಿತಂತೆ ಇಡಿ ವಿಚಾರಣೆ ಮುಂದೂಡಲು ಕೋರಿದ್ದಾರೆ. ಇದನ್ನು ಸಂಸ್ಥೆ ಒಪ್ಪಿಕೊಂಡಿದೆ. ಹಾಗಾಗಿ ಈಗ ವಿಚಾರಣೆಗೆ ಹೊಸ ದಿನಾಂಕವನ್ನು ನೀಡುವ ಸಾಧ್ಯತೆಯಿದೆ.

Leave A Reply