ಶಾಲೆಯಲ್ಲಿ ಮೊಟ್ಟೆ ನೀಡಿದ ಕಾರಣಕ್ಕೆ ಮಗನ ಟಿಸಿಯನ್ನೇ ಪಡೆದ ಅಪ್ಪಾ!|ಮೊಟ್ಟೆ ವಿಚಾರ ವಿದ್ಯಾಭ್ಯಾಸಕ್ಕೆ ಪೆಟ್ಟು ನೀಡಿತೇ?

ಕೊಪ್ಪಳ:ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದರ ವಿಚಾರವಾಗಿ ಬಿಸಿ-ಬಿಸಿ ಸುದ್ದಿ ನಡೆಯುತ್ತಲೇ ಇದೆ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡುತ್ತೇವೆ ಎಂದು ಸರ್ಕಾರ ತಿಳಿಸಿದರೂ ಮೊಟ್ಟೆ ತಿನ್ನದ ಪೋಷಕರು ಗರಂ ಆಗಿದ್ದಾರೆ.

ಹೀಗೆ ಮೊಟ್ಟೆ ವಿತರಣೆಗೆ ಪರ-ವಿರೋಧ ಅಭಿಪ್ರಾಯ ಕೇಳಿ ಬಂದ ಬೆನ್ನಲ್ಲೇ ಕೊಪ್ಪಳದ ವ್ಯಕ್ತಿಯೊಬ್ಬರು ಮೊಟ್ಟೆ ನೀಡಿದ ಕಾರಣಕ್ಕೆ ಮಗನ ಟಿಸಿಯನ್ನು ಪಡೆದು ಖಾಸಗಿ ಶಾಲೆಗೆ ಸೇರಿಸಿದ ಘಟನೆ ನಡೆದಿದೆ.

ಕೊಪ್ಪಳದ ರೈಲ್ವೆ ಸ್ಟೇಷನ್ ಎದುರಿಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಮಗನ ಟಿಸಿಯನ್ನು ಪಡೆದು ಕೊರ್ಲಹಳ್ಳಿ ಖಾಸಗಿ ಶಾಲೆಗೆ ಸೇರಿಸಿದ್ದಾರೆ.

ಮಗುವಿನ ತಂದೆ ಲಿಂಗಾಯಿತ ಧರ್ಮ ಮಹಾಸಭಾದ ರಾಜ್ಯಾಧ್ಯಕ್ಷ ವೀರಣ್ಣ. ಇವರು ಈ ಕುರಿತು ಮಾತನಾಡಿ,ಬಸವಧರ್ಮದ ಆಚರಣೆ ಮಾಡುವ ನಾವು ಮೊಟ್ಟೆ ತಿನ್ನುವುದಿಲ್ಲ. ಶಾಲೆಯಲ್ಲಿ ಮೊಟ್ಟೆ ಕೊಟ್ಟಾಗ ಮೊದಲು ಒಂದೆರಡು ದಿನ ಮಗು ತಿನ್ನುವುದಿಲ್ಲ. ನಂತರ ಮೊಟ್ಟೆ ತಿನ್ನುವುದನ್ನು ಕಲಿತು, ಮನೆಯಲ್ಲಿ ಮೊಟ್ಟೆ ಮಾಡಿಕೊಡಿ ಎಂದು ಹೇಳಿದರೆ ನಾವು ಏನು ಮಾಡಬೇಕು ಎಂದು ವೀರಣ್ಣ ಪ್ರಶ್ನಿಸಿದ್ದಾರೆ. ಈ ಕಾರಣದಿಂದ ಮಗನನ್ನು ಖಾಸಗಿ ಶಾಲೆಗೆ ಸೇರಿಸಿದ್ದಾರೆನ್ನಲಾಗಿದೆ.ಅಂತೂ ಮೊಟ್ಟೆ ಹೊಟ್ಟೆಗೆ ಬೇಕೇ ಬೇಡವೇ? ಯಾವ ನಿರ್ಧಾರ ಸರಿದೂಗುತ್ತೋ ಕಾದುನೋಡಬೇಕಷ್ಟೆ.

Leave A Reply

Your email address will not be published.